ಹೊಸದಿಗಂತ ಡಿಜಿಟಲ್ ಡೆಸ್ಕ್
ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಸೋಮವಾರ ದೆಹಲಿಯ ರಾಷ್ಟ್ರಪತಿ ಭವನದಲ್ಲಿ ನಡೆದ ಸಮಾರಂಭದಲ್ಲಿ ಪದ್ಮ ವಿಭೂಷಣ, ಪದ್ಮಭೂಷಣ ಮತ್ತು ಪದ್ಮಶ್ರೀ ಪ್ರಶಸ್ತಿ 2022 ಅನ್ನು ಪ್ರಧಾನ ಮಾಡಿದರು.
ಈ ವೇಳೆ ಸುರಂಗ ಕೊರೆದು ಭಗೀರಥ ಪ್ರಯತ್ನದ ಮೂಲಕ ನೀರು ಹರಿಸಿದ ದಕ್ಷಿಣ ಕನ್ನಡ ಜಿಲ್ಲೆಯ ಅಮೈ ಮಹಾಲಿಂಗ ನಾಯ್ಕ್ ಅವರು ರಾಷ್ಟ್ರಪತಿಗಳಿಂದ ಪದ್ಮಶ್ರೀ ಪುರಸ್ಕಾರ ಸ್ವೀಕರಿಸಿದರು.
ಈ ವೇಳೆ ಅವರು ಮುಟ್ಟಾಳೆ ಧರಿಸಿ ಆಗಮಿಸುವ ಮೂಲಕ ತುಳುನಾಡಿನ ಕೃಷಿ ಪರಂಪರೆಯನ್ನು ದೇಶ ವ್ಯಾಪ್ತಿ ಬಿಂಬಿಸಿದರು.