ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂದಿನಿಂದ ಅಮರನಾಥ ಯಾತ್ರೆ ಆರಂಭವಾಗಿದ್ದು, ದಕ್ಷಿಣ ಕಾಶ್ಮೀರದ ಭಗವತಿ ನಗರದ ಬೇಸ್ ಕ್ಯಾಂಪ್ನಿಂದ ಮೊದಲ ಬ್ಯಾಚ್ ಹೊರಟಿದೆ.
ಮೊದಲ ಬ್ಯಾಚ್ನಲ್ಲಿ 3,400 ಭಕ್ತರಿದ್ದಾರೆ. ಈ ಬಾರಿ ಒಟ್ಟಾರೆ ಮೂರು ಲಕ್ಷಕ್ಕೂ ಹೆಚ್ಚು ಭಕ್ತರು ನೋಂದಣಿ ಮಾಡಿಕೊಂಡಿದ್ದು, ಆಗಸ್ಟ್ 31 ರವರೆಗೂ ಯಾತ್ರೆ ನಡೆಯಲಿದೆ.
62 ದಿನಗಳ ಯಾತ್ರೆ ಇದಾಗಿದ್ದು, ಭಕ್ತರು ಯಾತ್ರೆ ಮೂಲಕ ಶಿವನ ದರುಶನ ಪಡೆಯಲಿದ್ದಾರೆ. ಯಾತ್ರಾರ್ಥಿಗಳಿಗೆ ತೊಂದರೆಯಾಗದಂತೆ ಎಲ್ಲ ತಯಾರಿಗಳನ್ನು ಮಾಡಿಕೊಳ್ಳಲಾಗಿದೆ. ಐಟಿಬಿಪಿ ಯೋಧರು ಯಾತ್ರೆಯ ಸಂಪೂರ್ಣ ಜವಾಬ್ದಾರಿಯನ್ನು ಹೊತ್ತಿದ್ದಾರೆ.