ಹೊಸದಿಗಂತ ಡಿಜಿಟಲ್ ಡೆಸ್ಕ್:
ನೀರಿನ ಒಳಗೆ ಮತ್ತು ಬೆಟ್ಟಗಳ ಮೇಲಿನ ಕಟ್ಟಡಗಳನ್ನು ನೀವು ನೋಡಿರುತ್ತೀರ. ಆದರೆ, ಗಾಳಿಯಲ್ಲಿ ತೇಲುವ ಕಟ್ಟಡವನ್ನು ಎಂದಾದರೂ ನೋಡಿದ್ದೀರಾ? ಸುಮ್ಮನೆ ಊಹಿಸಿಕೊಳ್ಳಿ. ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಮೂಲಕ ಕಲಾವಿದರು ನಿರ್ಮಿಸಿರುವ ಕಟ್ಟಡ ನೋಡಿದರೆ ಬೆರಗಾಗುತ್ತೀರಿ.
ಕೃತಕ ಬುದ್ಧಿಮತ್ತೆಯ ಮೂಲಕ ಜನರು ಅದ್ಭುತ ಕಲಾಕೃತಿಗಳನ್ನು ರಚಿಸುತ್ತಿದ್ದಾರೆ. ಪ್ರತೀಕ್ ಅರೋರಾ (_prateekarora) ಎಂಬ ಕಲಾವಿದ ಮುಂಬೈನ ಕಟ್ಟಡಗಳು ಗಾಳಿಯಲ್ಲಿ ತೇಲುತ್ತಿದ್ದರೆ ಹೇಗಿರುತ್ತದೆ ಎಂದು ಕಲ್ಪಿಸಿಕೊಂಡು ರಚಿಸಲಾದ ಈ ಚಿತ್ರವನ್ನು ‘ಮುಂಬೈ ಸರ್ರಿಯಲ್ ಎಸ್ಟೇಟ್’ ಶೀರ್ಷಿಕೆಯೊಂದಿಗೆ ಪೋಸ್ಟ್ ಮಾಡಲಾಗಿದೆ. ಇಂಟರ್ನೆಟ್ ಬಳಕೆದಾರರು ಈ ಚಿತ್ರಗಳನ್ನು ಕಂಡು ಮಂತ್ರಮುಗ್ಧರಾಗಿದ್ದಾರೆ.
ಅವರ ಪ್ರತಿಭೆಯನ್ನು ನೆಟ್ಟಿಗರು ಶ್ಲಾಘಿಸುತ್ತಿದ್ಡಾರೆ. ಈಗಲೇ ಮುಂಬೈನಲ್ಲಿ ಬಾಡಿಗೆ ಮನೆ ಬೆಲೆ ಗಗನಕ್ಕೇರಿದೆ. ಹೀಗಿರುವಾಗ ಈ ಮಟ್ಟಿಗೆ ಅಭಿವೃದ್ಧಿಯಾದರೆ ಏನು ಕತೆ ಎಂಬ ಕಮೆಂಟ್‌ಗಳೂ ಬರುತ್ತಿವೆ.