ಹೊಸದಿಗಂತ ಡಿಜಿಟಲ್ ಡೆಸ್ಕ್:
ಖಲಿಸ್ತಾನಿ ಉಗ್ರ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆ ಪ್ರಕರಣದಲ್ಲಿ ಭಾರತ ರಾಯಭಾರಿಗಳ ವಿರುದ್ಧ ಪ್ರಕರಣ ದಾಖಲಿಸುವ ಕೆನಡಾ ಸರ್ಕಾರದ ನಡೆಗೆ ಭಾರತ ಆಕ್ರೋಶ ವ್ಯಕ್ತಪಡಿಸಿದೆ.
ಕೆನಡಾ ಪ್ರಧಾನಿ ಜಸ್ಟಿನ್ ಟ್ರೂಡೋ ವೋಟ್ ಬ್ಯಾಂಕ್‌ಗಾಗಿ ರಾಜಕೀಯ ಮಾಡ್ತಿದ್ದಾರೆ, ಉಗ್ರರಿಗೆ ಬೆಂಬಲ ಕೊಡ್ತಿದ್ದಾರೆ ಎಂದು ಭಾರತ ಆಕ್ರೋಶ ವ್ಯಕ್ತಪಡಿಸಿದೆ.
ಖಲಿಸ್ತಾನಿ ಉಗ್ರ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆ ಪ್ರಕರಣದಲ್ಲಿ ಭಾರತದ ರಾಯಭಾರಿಯ ಮೇಲೆ ಕೇಸ್ ಹಾಕುವ ಪ್ರಯತ್ನ ನಡೆಯುತ್ತಿದೆ. ಇದಕ್ಕೆ ಖಡಕ್ ತಿರುಗೇಟು ನೀಡಿರುವ ಭಾರತ, ಖಲಿಸ್ತಾನಿಗಳ ಜೊತೆ ಸೇರಿ ಭಾರತದ ವಿರುದ್ಧ ಪಿತೂರಿ ಮಾಡ್ತಿದ್ದಾರೆ ಅಂತ ವಿದೇಶಾಂಗ ವ್ಯವಹಾರಗಳ ಇಲಾಖೆ ಹೇಳಿದೆ.
ನಿಜ್ಜರ್ ಹತ್ಯೆ ಪ್ರಕರಣದಲ್ಲಿ ಭಾರತದ ರಾಯಭಾರಿ ಮೇಲೆ ಕೇಸ್ ಹಾಕುವ ವಿಚಾರವಾಗಿ ಕೆನಡಾ ಭಾರತದ ಅನುಮತಿ ಕೇಳಿದ್ದು, ಇದಕ್ಕೆ ಭಾರತ ಖಡಕ್ ತಿರುಗೇಟು ನೀಡಿದೆ. ಹಾಗೇನಾದರೂ ಕೆನಡಾ ಮುಂದುವರಿದಲ್ಲಿ ಸೂಕ್ತ ಕ್ರಮ ಕೈಗೊಳ್ಳಲಿದ್ದೇವೆ ಎಂದು ತಿಳಿಸಿದೆ.
ಈ ಕೇಸ್‌ನಲ್ಲಿ ಮೂರು ಜನ ಭಾರತೀಯರನ್ನು ಬಂಧಿಸಲಾಗಿದೆ. ಕರಣ್ ಬ್ರಾರ್, ಕಮಲ್‌ಪ್ರೀತ್ ಸಿಂಗ್, ಕರಣ್‌ಪ್ರೀತ್ ಸಿಂಗ್‌ರನ್ನ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆ ಕೇಸ್‌ನಲ್ಲಿ ಕೆನಡಾ ಪೊಲೀಸರು ಎಡ್ಮಂಟನ್‌ನಲ್ಲಿ ಬಂಧಿಸಿದ್ದಾರೆ,ಬಂಧಿತರಾದ ಮೂರು ಜನ ಭಾರತೀಯರು. ಕಳೆದ ಮೂರು ನಾಲ್ಕು ವರ್ಷಗಳಿಂದ ಅವರು ಕೆನಡಾದಲ್ಲಿದ್ದಾರೆ ಅಂತ ಕೆನಡಾ ಪೊಲೀಸರು ಹೇಳಿದ್ದಾರೆ. ಆದರೆ, ಅವರಿಗೆ ಇಂಡಿಯಾ ಸರ್ಕಾರದ ಜೊತೆ ಸಂಬಂಧ ಇದೆಯಾ ಅನ್ನೋದರ ಬಗ್ಗೆ ಈಗ ಏನೂ ಹೇಳೋಕೆ ಆಗಲ್ಲ, ತನಿಖೆ ನಡೀತಿದೆ ಅಂತ ಪೊಲೀಸರು ಹೇಳಿದ್ದಾರೆ.
ಕೆನಡಾ ಸರ್ಕಾರದ ಹೇಳಿಕೆಯನ್ನು ಅಸಂಬದ್ಧ ಆರೋಪ ಎಂದು ಹೇಳಿರುವ ಭಾರತೀಯ ರಾಯಭಾರ ಕಚೇರಿ ಅಧಿಕಾರಿ, ಇದು ಟ್ರುಡೊ ಸರ್ಕಾರದ ರಾಜಕೀಯ ಅಜೆಂಡಾ ಎಂದು ಹೇಳಿದೆ. ವಿದೇಶಾಂಗ ವ್ಯವಹಾರಗಳ ಸಚಿವಾಲಯ (MEA) ಕೆನಡಾದ ಪ್ರಧಾನ ಮಂತ್ರಿ ಜಸ್ಟಿನ್ ಟ್ರುಡೊ ಅವರು ಸೆಪ್ಟೆಂಬರ್ 2023 ರಲ್ಲಿ ಕೆಲವು ಆರೋಪಗಳನ್ನು ಮಾಡಿದ್ದಾರೆ ಎಂದು ಹೇಳಿದೆ. ಆದಾಗ್ಯೂ, ಕೆನಡಾ ಸರ್ಕಾರ ಭಾರತ ಸರ್ಕಾರದಿಂದ ಹಲವಾರು ವಿನಂತಿಗಳ ಹೊರತಾಗಿಯೂ ಒಂದೇ ಒಂದು ಸಾಕ್ಷ್ಯವನ್ನು ಹಂಚಿಕೊಂಡಿಲ್ಲ ಎಂದು ತಿಳಿಸಿದೆ.
ನಾವು ನಿನ್ನೆ ಕೆನಡಾದಿಂದ ರಾಜತಾಂತ್ರಿಕ ಸಂವಹನವನ್ನು ಸ್ವೀಕರಿಸಿದ್ದೇವೆ, ಆ ದೇಶದಲ್ಲಿನ ತನಿಖೆಗೆ ಸಂಬಂಧಿಸಿದ ವಿಷಯದಲ್ಲಿ ಭಾರತೀಯ ಹೈಕಮಿಷನರ್ ಮತ್ತು ಇತರ ರಾಜತಾಂತ್ರಿಕರು ‘ಹಿತಾಸಕ್ತ ವ್ಯಕ್ತಿಗಳು’ ಎಂದು ಸೂಚಿಸಿವೆ. ಭಾರತ ಸರ್ಕಾರ ಈ ಅಸಂಬದ್ಧ ಆರೋಪಗಳನ್ನು ಬಲವಾಗಿ ತಿರಸ್ಕರಿಸುತ್ತದೆ ಮತ್ತು ವೋಟ್ ಬ್ಯಾಂಕ್ ರಾಜಕೀಯದ ಸುತ್ತ ಕೇಂದ್ರೀಕೃತವಾಗಿರುವ ಟ್ರುಡೊ ಸರ್ಕಾರದ ರಾಜಕೀಯ ಕಾರ್ಯಸೂಚಿಗೆ ಅವರನ್ನು ಆರೋಪಿಸುತ್ತದೆ ಎಂದು ಭಾರತದ ವಿದೇಶಾಂಗ ಇಲಾಖೆ ಹೇಳಿದೆ.