ಅಮೆರಿಕದಲ್ಲಿ ಅತಿದೊಡ್ಡ ಅಂಬೇಡ್ಕರ್ ಪ್ರತಿಮೆ: ಅಕ್ಟೋಬರ್ 14ರಂದು ಅನಾವರಣ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಭಾರತದ ಸಂವಿಧಾನದ ಪಿತಾಮಹ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರ ಅತಿದೊಡ್ಡ ಪ್ರತಿಮೆ ಅಮೆರಿಕದಲ್ಲಿ ಅನಾವರಣಗೊಳಿಸಲು ಸಜ್ಜಾಗಿದೆ. ಅಕ್ಟೋಬರ್ 14 ರಂದು ಅಮೆರಿಕದ ಮೇರಿಲ್ಯಾಂಡ್‌ನಲ್ಲಿ ಅತಿದೊಡ್ಡ ಪ್ರತಿಮೆ ಅನಾವರಣಗೊಳ್ಳಲಿದೆ.

‘ಸಮಾನತೆಯ ಪ್ರತಿಮೆ’ ಎಂಬ ಹೆಸರಿನ 19 ಅಡಿ ಪ್ರತಿಮೆಯನ್ನು ನಿರ್ಮಿಸಲಾಗಿದೆ. ಮೇರಿಲ್ಯಾಂಡ್‌ನ ಅಕೋಕೀಕ್‌ನಲ್ಲಿ 13 ಎಕರೆ ಭೂಮಿಯಲ್ಲಿ ಸ್ಥಾಪಿಸಲಾದ ಅಂಬೇಡ್ಕರ್ ಅಂತರರಾಷ್ಟ್ರೀಯ ಕೇಂದ್ರದ (ಎಐಸಿ) ಭಾಗವಾಗಿ ಪ್ರತಿಮೆಯನ್ನು ನಿರ್ಮಿಸಲಾಗಿದೆ.

ಡಾ.ಬಿ.ಆರ್.ಅಂಬೇಡ್ಕರ್ ಅವರ ಬೋಧನೆ ಮತ್ತು ಸಿದ್ಧಾಂತಗಳನ್ನು ಹರಡುವ ಉದ್ದೇಶದಿಂದ ಈ ಪ್ರತಿಮೆಯನ್ನು ಸ್ಥಾಪಿಸಲಾಗಿದೆ ಎಂದು ಎಐಸಿ ಹೇಳಿದೆ. ಇದಲ್ಲದೆ, ಸಮಾನತೆ ಮತ್ತು ಮಾನವ ಹಕ್ಕುಗಳ ಸಂಕೇತವಾಗಿದೆ. ಭಾರತದ ಹೊರಗೆ ಅಂಬೇಡ್ಕರ್ ಅವರ ಅತಿದೊಡ್ಡ ಪ್ರತಿಮೆ ಇದಾಗಿದ್ದು, ಪ್ರತಿಮೆ ಅನಾವರಣ ಕಾರ್ಯಕ್ರಮದಲ್ಲಿ ವಿಶ್ವದಾದ್ಯಂತದ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ.

ವಿಶೇಷತೆಯೆಂದರೆ, ಗುಜರಾತ್‌ನಲ್ಲಿ ಸರ್ದಾರ್ ಪಟೇಲ್ ಪ್ರತಿಮೆಯನ್ನು (ಏಕತಾ ಪ್ರತಿಮೆ) ವಿನ್ಯಾಸಗೊಳಿಸಿದ ಖ್ಯಾತ ಶಿಲ್ಪಿ ರಾಮ್ ಸುತಾರ್ ಅವರೇ ಈ ಪ್ರತಿಮೆಯನ್ನು ವಿನ್ಯಾಸಗೊಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!