ನ.1ರಂದು ಆಲೂರಿನ ತಾಲೂಕು ಕಚೇರಿ ಮುಂದೆ ಅಂಬೇಡ್ಕರ್ ಪ್ರತಿಮೆ ಅನಾವರಣ

ಹೊಸದಿಗಂತ ವರದಿ ಆಲೂರು :

ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರ ಪ್ರತಿಮೆ ತಾಲ್ಲೂಕು ಕಛೇರಿ ಮುಂದೆ ನ.1 ರಂದು ಅನಾವರಣಗೊಳ್ಳಲಿದ್ದು ಕ್ಷೇತ್ರದ ಎಲ್ಲಾ ನಾಗರೀಕರು ಹೆಚ್ಚು ಸಂಖ್ಯೆಯಲ್ಲಿ ಕಾರ್ಯಕ್ರಮಕ್ಕೆ ಆಗಮಿಸಿ ಯಶಸ್ವಿಗೆ ಕಾರಣರಾಗಬೇಕು ಎಂದು ಆಲೂರು-ಸಕಲೇಶಪುರ ಕ್ಷೇತ್ರದ ಶಾಸಕ ಸಿಮೆಂಟ್ ಮಂಜು ಮನವಿ ಮಾಡಿದರು.

ಅವರು ಆಲೂರಿನ ತಮ್ಮ ಕಛೇರಿಯಲ್ಲಿ ಪತ್ರಿಕೆಯೊಂದಿಗೆ ಮಾತನಾಡಿ ಶೋಷಿತ ವರ್ಗಗಳಿಗೆ ಸಾಮಾಜಿಕ ಮತ್ತು ಆರ್ಥಿಕ ಸ್ಥಾನಮಾನ ಕಲ್ಪಿಸಲು ಅವರು ನಡೆಸಿದ ಹೋರಾಟ ಅವಿಸ್ಮರಣೀಯವಾದದು. ಶೋಷಿತ ವರ್ಗಗಳ ಸಬಲೀಕರಣಕ್ಕಾಗಿ ಅವರು ಅನೇಕ ಪ್ರಗತಿಪರ ಚಿಂತನೆಗಳನ್ನು ನೀಡಿದರು. ಸಂವಿಧಾನದ ಮೂಲಕ ಭಾರತದ ಎಲ್ಲ ಜನರಿಗೂ ಸಮಾನತೆ ಮತ್ತು ಸ್ವಾತಂತ್ರ್ಯವನ್ನು ನೀಡಿದ ಮಹಾನ್ ನಾಯಕ ಅವರ ಪುತ್ತಳಿಯನ್ನು ತಾಲ್ಲೂಕು ಕಛೇರಿ ಮುಂದೆ ನಿರ್ಮಾಣ ಮಾಡಿ ಅನಾವರಣಗೊಳಿಸುತ್ತಿರುವುದು ಎಲ್ಲಾ ವರ್ಗದ ಜನರಿಗೂ ಸಂತೋಷ ತಂದಿದೆ.

ಅನಾವರಣ ಕಾರ್ಯಕ್ರಮಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ರಾಜಣ್ಣ,ಉರಿಲಿಂಗ ಪೆದ್ದಿಮಠದ ಜ್ಞಾನ ಪ್ರಕಾಶ್ ಸ್ವಾಮೀಜಿ ಸೇರಿದಂತೆ ಇತರೆ ಎಲ್ಲಾ ನಾಯಕರು ಹಾಜರಿರುತ್ತಾರೆ ಅದ್ದರಿಂದ ಬಾಬಾಸಾಹೇಬ್ ಡಾ.ಅಂಬೇಡ್ಕರ್ ರವರ ಅಭಿಮಾನಿಗಳು,ಆಲೂರು-ಸಕಲೇಶಪುರ ಸೇರಿದಂತೆ ಎಲ್ಲಾ ತಾಲ್ಲೂಕಿನ ಬಿಜೆಪಿ ಮುಖಂಡರು,ವಿವಿಧ ಪರ ಸಂಘಟನೆಗಳು,ಕನ್ನಡಪರ ಸಂಘಟನೆಗಳು,ಎಲ್ಲಾ ಇಲಾಖೆ ಅಧಿಕಾರಿಗಳು ಹಾಗೂ ಜನಸಾಮಾನ್ಯರು ಕಾರ್ಯಕ್ರಮಕ್ಕೆ ಹಾಜರಾಗಿ ಯಶಸ್ವಿಗೆ ಕಾರಣರಾಗಬೇಕು ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಲೋಕೇಶ್ ಕಣಗಾಲ್,ಅಜಿತ್ ಚಿಕ್ಕಣಗಾಲ್,ಬಾಲಲೋಚನಾ,ರಾಮಯ್ಯ,ಗಣೇಶ್ ಸ್ನೇಹಜೀವಿ,ದೊರೇಗೌಡ ಸೇರಿದಂತೆ ಇತರೆ ನಾಯಕರು ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!