ಹೊಸದಿಗಂತ ಡಿಜಿಟಲ್ ಡೆಸ್ಕ್
ರಾಜಸ್ಥಾನದ ಬನ್ಸವಾರದಲ್ಲಿ ಆಸ್ಪತ್ರೆ ಸಾಗಿಸುತ್ತಿದ್ದ ಆ್ಯಂಬುಲೆನ್ಸ್ಖಾಇಂಧನ ಲಿಯಾಗಿ ದಾರಿ ಮಧ್ಯದಲ್ಲೇ ವ್ಯಕ್ತಿ ಮೃತಪಟ್ಟ ಘಟನೆ ನಡೆದಿದೆ.
ಆ್ಯುಂಬುಲೆನ್ಸ್ ರೋಗಿಯನ್ನು ಆಸ್ಪತ್ರೆ ಸಾಗಿಸುತ್ತಿದ್ದ ವೇಳೆ ಇಂಧನ ಖಾಲಿಯಾಗಿ ಮಾರ್ಗ ಮಧ್ಯೆದಲ್ಲಿ ನಿಂತಿದೆ. ಈ ವೇಳೆ ಚಾಲಕ, ಆ್ಯಂಬುಲೆನ್ಸ್ ಇಂಧನ ಖಾಲಿಯಾಗಿದೆ ಎಂದುರೋಗಿಯ ಸಂಬಂಧಿಕರಿಗೆ ಹೇಳಿದ್ದಾನೆ. ದಿಕ್ಕೆ ತೋಚದ ಸಂಬಂಧಿಕರು ಆ್ಯುಂಬುಲೆನ್ಸ್ ತಳ್ಳಿ ಆಸ್ಪತ್ರೆ ಸಾಗಿಸುವ ಪ್ರಯತ್ನ ಮಾಡಿದ್ದಾರೆ. ಆದರೆ ಆಸ್ಪತ್ರೆ ದಾರಿ ದೂರವಿದ್ದ ಕಾರಣ ಸಂಬಂಧಿಕರ ಹೋರಾಟಕ್ಕೆ ಯಶಸ್ಸು ಸಿಗಲಿಲ್ಲ. ತಳ್ಳುತ್ತಾ ಕೆಲ ದೂರ ಸಾಗಿದಾಗಲೇ ರೋಗಿ ಮೃತಪಟ್ಟಿದ್ದಾರೆ.
ಈ ಘಟನೆ ಭಾರಿ ಕೋಲಾಹಲಕ್ಕೆ ಕಾರಣವಾಗಿದೆ. ರಾಜಸ್ಥಾನ ಕಾಂಗ್ರೆಸ್ ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತವಾಗುತ್ತಿದೆ. ಇದರ ಬೆನ್ನಲ್ಲೇ ಸಚಿವ ಪ್ರತಾಪ್ ಸಿಂಗ್ ಕಚಾರಿಯಾವಾಸ್ ಘಟನೆಗೆ ಸಂತಾಪ ವ್ಯಕ್ತಪಡಿಸಿದ್ದಾರೆ. ಆಡಳಿತ ಮಂಡಳಿಯ ನಿರ್ಲಕ್ಷ್ಯವಾಗಿದೆ. 108 ಆ್ಯಂಬುಲೆನ್ಸ್ ಸೇವೆಯ ನಿರ್ವಹಣೆಯನ್ನು ಖಾಸಗಿ ಕಂಪನಿ ಮಾಡುತ್ತಿದೆ. ಈ ರೋಗಿಯ ಸಾವಿಗೆ ಖಾಸಗಿ ಕಂಪನಿ ಹಾಗೂ ಆಡಳಿತ ಮಂಡಳಿ ಕಾರಣ ಎಂದು ಪ್ರತಾಪ್ ಸಿಂಗ್ ಹೇಳಿದ್ದಾರೆ.
ಘಟನೆಯ ವರದಿ ಕೇಳಿದ್ದೇವೆ. 108 ಆ್ಯಂಬುಲೆನ್ಸ್ ನಿರ್ವಹಣೆಯನ್ನು ಖಾಸಗಿ ಕಂಪನಿ ಮಾಡುತ್ತಿದೆ. ಇದು ಕಂಪನಿಯ ನಿರ್ಲಕ್ಷ್ಯ ಹಾಗೂ ಬೇಜಾಬ್ದಾರಿತನವಾಗಿದೆ. ಕಂಪನಿ ಹಾಗೂ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳುವುದಾಗಿ ಬನ್ಸವಾರ ಆರೋಗ್ಯ ಅಧಿಕಾರಿ ಹೇಳಿದ್ದಾರೆ.