ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇರಳದ ಬಹುತೇಕ ಸರ್ಕಾರಿ ಆಸ್ಪತ್ರೆಗಳು ಆಂಬುಲೆನ್ಸ್ ಸೌಲಭ್ಯದ ಕೊರತೆಯಲ್ಲಿ ನಲುಗುತ್ತಿವೆ ಎಂಬ ಅಂಶ ಬಯಲಾಗಿದೆ.
ಆರೋಗ್ಯ ಇಲಾಖೆ ನಿರ್ದೇಶಕರು ನೀಡಿರುವ ವರದಿಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳು, ತಾಲೂಕು, ಜಿಲ್ಲಾ ಆಸ್ಪತ್ರೆಗಳು ಆಂಬ್ಯುಲೆನ್ಸ್ ಕೊರತೆ ಎದುರಿಸುತ್ತಿವೆ. ಜೊತೆಗೆ ರಾಜ್ಯದ 615 ಸರ್ಕಾರಿ ಆರೋಗ್ಯ ಸಂಸ್ಥೆಗಳು ಈಗ ಆಂಬ್ಯುಲೆನ್ಸ್ ಇಲ್ಲದೆಯೇ ಕಾರ್ಯ ನಿರ್ವಹಿಸುತ್ತಿವೆ ಎಂದು ಉಲ್ಲೇಖಿಸಲಾಗಿದೆ.
ಆಂಬುಲೆನ್ಸ್ ಇಲ್ಲದ ಅತೀ ಹೆಚ್ಚು ಆಸ್ಪತ್ರೆಗಳು ಎರ್ನಾಕುಳಂ ಜಿಲ್ಲೆಯಲ್ಲಿಯೇ ಇವೆ. ಇಲ್ಲಿನ 79 ಆರೋಗ್ಯ ಸಂಸ್ಥೆಗಳಿಗೆ ಆಂಬ್ಯುಲೆನ್ಸ್ ಇಲ್ಲ. ಇನ್ನು ದುರಸ್ಥಿಗಾಗಿ ಹೋಗಿರುವ ಹಲವು ಆಂಬ್ಯುಲೆನ್ಸ್‌ಗಳನ್ನು ವಾಪಸ್ ತರುವಷ್ಟು ಹಣವಿಲ್ಲ ಎಂಬ ಮಾಹಿತಿ ಬಂದಿದೆ ಎಂದು ವರದಿಯಲ್ಲಿ ಹೇಳಲಾಗಿದ್ದು, ಆಂಬ್ಯುಲೆನ್ಸ್ ಇಲ್ಲದ ಆಸ್ಪತ್ರೆಗಳು ತಕ್ಷಣ ಈ ಸೇವೆ ಅಳವಡಿಸಿಕೊಳ್ಳುವಂತೆ ವರದಿಯಲ್ಲಿ ಸೂಚಿಸಲಾಗಿದೆ.
ಕೇರಳದ ತಿರುವನಂತಪುರಂನಲ್ಲಿ 21, ಕೊಲ್ಲಂನಲ್ಲಿ 31, ಪತ್ತನಂತಿಟ್ಟದಲ್ಲಿ 20, ಆಲಪ್ಪ್ಪುಳದಲ್ಲಿ 70, ಕೊಟ್ಟಾಯಂನಲ್ಲಿ 27, ಇಡುಕ್ಕಿಯಲ್ಲಿ 21, ಎರ್ನಾಕುಲಂನಲ್ಲಿ 79, ತ್ರಿಶೂರ್‌ನಲ್ಲಿ 78, ಪಾಲಕ್ಕಾಡ್‌ನಲ್ಲಿ 78, ಮಲಪ್ಪ್ಪುರಂನಲ್ಲಿ 40, ಕೋಝಿಕ್ಕೋಡ್‌ನಲ್ಲಿ 42, ವಯನಾಡ್‌ನಲ್ಲಿ 23, ಕಣ್ಣೂರಿನಲ್ಲಿ 42, ಕಾಸರಗೋಡಿನಲ್ಲಿ 43 ವೈದ್ಯಕೀಯ ಆಸ್ಪತ್ರೆಗಳು ಆಂಬುಲೆನ್ಸ್ ಕೊರತೆ ಎದುರಿಸುತ್ತಿವೆ.