ಹೊಸದಿಗಂತ ಡಿಜಿಟಲ್ ಡೆಸ್ಕ್:
ಇರಾಕ್, ಸಿರಿಯಾದಲ್ಲಿ ಇರಾನ್ ನೆಲೆಗಳ ಮೇಲೆ ಅಮೆರಿಕ ಏರ್ಸ್ಟ್ರೈಕ್ ಮಾಡಿದ್ದು, ಒಟ್ಟಾರೆ 85 ಟಾರ್ಗೆಟ್ಸ್ ಮೇಲೆ ದಾಳಿ ನಡೆದಿದೆ.
ಜೋರ್ಡಾನ್ ಮೇಲಿನ ದಾಳಿಗೆ ಅಮೆರಿಕ ಪ್ರತಿದಾಳಿ ಮಾಡಿದ್ದು, ಏಳು ಸ್ಥಳಗಳನ್ನು ಟಾರ್ಗೆಟ್ ಮಾಡಿ 17 ಉಗ್ರರನ್ನು ಸದೆಬಡೆಯಲಾಗಿದೆ.
85 ಇರಾನ್ ರೆವಲ್ಯೂಷನರಿ ಗಾರ್ಡ್ಸ್ ಘಟಕಗಳ ಮೇಲೆ ಅಮೆರಿಕ ವೈಮಾನಿಕ ದಾಳಿ ನಡೆಸಿದೆ. ಕಮಾಂಡ್, ಕಂಟ್ರೋಲ್ ಸೆಂಟರ್, ರಾಕೆಟ್, ಕ್ಷಿಪಣಿ, ಡ್ರೋನ್ ಸಂಗ್ರಹಣಾ ಕೇಂದ್ರ, ಲಾಜಿಸ್ಟಿಕ್ಸ್ ಹಾಗೂ ಸ್ಫೋಟಕ ವಸ್ತುಗಳನ್ನು ಸಂಗ್ರಹಿಸಿ ಇಟ್ಟಿದ್ದ ಸ್ಥಳಗಳನ್ನೇ ಅಮೆರಿಕ ಟಾರ್ಗೆಟ್ ಮಾಡಿದೆ. ಸಿರಿಯಾದಲ್ಲಿ ನಾಲ್ಕು ಹಾಗೂ ಇರಾಕ್ನಲ್ಲಿ ಮೂರು ಸ್ಥಳಗಳಲ್ಲಿ ದಾಳಿ ಮಾಡಲಾಗಿದೆ.
ಕಳೆದ ಭಾನುವಾರ ಅಮೆರಿಕದ ಜೋರ್ಡಾನ್ನ ಅಮೆರಿಕನ್ ಪೋಸ್ಟ್ಮೇಲೆ ದಾಳಿ ಮಾಡಲಾಗಿತ್ತು. ಇದರಿಂದ ಮೂವರು ಯೋಧರು ಮೃತಪಟ್ಟಿದ್ದು, 41ಸೈನಿಕರು ಗಾಯಗೊಂಡಿದ್ದರು. ಇದಕ್ಕೆ ಇರಾನ್ ಬೆಂಬಲಿತ ಸೇನೆಯೇ ಕಾರಣ ಎಂದು ಅಮೆರಿಕ ಆರೋಪಿಸಿತ್ತು.