March 31, 2026
Tuesday, March 31, 2026
spot_img

ಇನ್ನು ನಿಮ್ಮ ಸಹಾಯಕ್ಕೆ ಅಮೆರಿಕ ಇಲ್ಲ, ಹಾರ್ಮುಜ್​ಗೆ ಹೋಗಿ ತೈಲ ಪಡೆದುಕೊಳ್ಳಿ: ಮಿತ್ರರಾಷ್ಟ್ರಗಳಿಗೆ ಟ್ರಂಪ್ ಚಾಟಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಧ್ಯಪ್ರಾಚ್ಯದ ಸಂಘರ್ಷ ನಡುವೆ ಅಮೆರಿಕ ಡೊನಾಲ್ಡ್ ಟ್ರಂಪ್ ಯುದ್ಧದಲ್ಲಿ ಭಾಗವಹಿಸಲು ನಿರಾಕರಿಸಿದ ದೇಶಗಳ ವಿರುದ್ಧ ಕೆಂಡಾಮಂಡಲವಾಗಿದ್ದು, ನೀವೇ ಹಾರ್ಮುಜ್ ಜಲಸಂಧಿಗೆ ತೆರಳಿ ತೈಲ ಖರೀದಿಸಿ, ನಿಮ್ಮ ಸಹಾಯಕ್ಕೆ ನಾವು ಇಲ್ಲ ಎಂದು ನೇರವಾಗಿ ಚಾಟಿ ಬೀಸಿದರು .

ಹಾರ್ಮುಜ್ ಜಲಸಂಧಿ ಮೇಲೆ ಕಣ್ಣಿಟ್ಟಿರುವ ಟ್ರಂಪ್ ಗೆ ನೆರೆ ದೇಶಗಳು ಸಹಾಯ ಮಾಡಲು ನಿರಾಕರಿಸಿದ್ದು, ಈ ಕಾರಣದಿಂದ ದೊಡ್ಡಣ್ಣ ಖಡಕ್ ಸೂಚನೆ ನೀಡಿದೆ.

ಈ ಕುರಿತು ತಮ್ಮ ಟ್ರೂತ್ ಸೋಷಿಯಲ್ ಪೋಸ್ಟ್​ನಲ್ಲಿ , ಬ್ರಿಟನ್ ಸಹಿತ ಇತರ ದೇಶಗಳ ವಿರುದ್ಧ ಆಕ್ರೋಶ ಹೊರಹಾಕಿದ ಟ್ರಂಪ್ , ಯುದ್ಧದಲ್ಲಿ ಭಾಗವಹಿಸಲು ನಿರಾಕರಿಸುವ ದೇಶಗಳಿಗೆ ನನ್ನ ಸಲಹೆ ಏನೆಂದರೆ, ಒಂದೋ ಅಮೆರಿಕದಿಂದ ತೈಲ ಖರೀದಿಸಿ. ನಮ್ಮಲ್ಲಿ ಸಾಕಷ್ಟು ತೈಲ ಇದೆ. ಇಲ್ಲವೇ ನೀವೇ ಧೈರ್ಯ ಮಾಡಿ ಜಲಸಂಧಿಗೆ ಹೋಗಿ ತೈಲ ತೆಗೆದುಕೊಳ್ಳಿ’ ಎಂದು ಖಡಕ್ ಆಗಿ ಹೇಳಿದ್ದಾರೆ.

ಯಾವ ರೀತಿ ನೀವು ಅಮೆರಿಕದ ಸಹಾಯಕ್ಕೆ ಇಲ್ಲವೋ, ಅದೇ ರೀತಿ ಮುಂದಿನ ದಿನಗಳಲ್ಲಿ ನಿಮಗೆ ಸಹಾಯ ಮಾಡಲು ಅಮೆರಿಕ ಇರುವುದಿಲ್ಲ. ಈಗಾಗಲೇ ಇರಾನ್ ನ ಪ್ರಮುಖ ಸ್ಥಳಗಳನ್ನು ನೆಲಸಮ ಮಾಡಿದ್ದೇವೆ. ನಿಮ್ಮ ತೈಲವನ್ನು ಪಡೆದುಕೊಳ್ಳಿ ಹೋಗಿ ಎಂದು ಟ್ರಂಪ್ ಸವಾಲು ಹಾಕಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !