June 17, 2026
Wednesday, June 17, 2026
spot_img

ಇನ್ಮುಂದೆ ಹಾರ್ಮುಜ್ ದಾಟೋಕೆ ಕಟ್ಟಬೇಕು ಟೋಲ್: ಹೊಸ ಸುಂಕ ವ್ಯವಸ್ಥೆಗೆ ಇರಾನ್ ಗ್ರೀನ್ ಸಿಗ್ನಲ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಜಾಗತಿಕ ತೈಲ ಸಾಗಣೆಗೆ ಪ್ರಮುಖ ಮಾರ್ಗವಾಗಿರುವ ಹಾರ್ಮುಜ್ ಜಲಸಂಧಿಯಲ್ಲಿ ಹೊಸ ಸುಂಕ ವ್ಯವಸ್ಥೆ ಜಾರಿಗೆ ತರಲು ಇರಾನ್ ಸಂಸತ್ತಿನ ಭದ್ರತಾ ಸಮಿತಿ ಅನುಮೋದನೆ ನೀಡಿದೆ.

ಈ ಯೋಜನೆಯಡಿ ಕೆಲವು ದೇಶಗಳ ಹಡಗುಗಳಿಗೆ ಟೋಲ್ ವಿಧಿಸುವುದರ ಜೊತೆಗೆ, ಶತ್ರು ರಾಷ್ಟ್ರಗಳ ಹಡಗುಗಳಿಗೆ ನಿರ್ಬಂಧ ಹೇರಲು ಅವಕಾಶ ಕಲ್ಪಿಸಲಾಗಿದೆ ಎಂದು ಸರ್ಕಾರಿ ಮಾಧ್ಯಮಗಳು ವರದಿ ಮಾಡಿವೆ.

ಹೊಸ ವ್ಯವಸ್ಥೆಯಲ್ಲಿ ರಿಯಾಲ್ ಆಧಾರಿತ ಟೋಲ್ ವ್ಯವಸ್ಥೆ ಪರಿಚಯವಾಗಲಿದ್ದು, ಕಡಲ ಭದ್ರತೆ, ಹಡಗುಗಳ ಸುರಕ್ಷತೆ ಮತ್ತು ಪರಿಸರ ಸಂರಕ್ಷಣೆಗಾಗಿ ಹಣಕಾಸು ವ್ಯವಸ್ಥೆ ರೂಪಿಸಲಾಗುತ್ತದೆ. ಈ ಯೋಜನೆ ಮುಖ್ಯವಾಗಿ ಇರಾನ್ ಮಿತ್ರ ರಾಷ್ಟ್ರಗಳಿಗೆ ಅನ್ವಯವಾಗಲಿದೆ. ಅಮೆರಿಕ ಮತ್ತು ಇಸ್ರೇಲ್ ಹಡಗುಗಳನ್ನು ಈ ವ್ಯವಸ್ಥೆಯಿಂದ ಹೊರಗಿಡಲಾಗಿದ್ದು, ಅವರಿಗೆ ಜಲಸಂಧಿಯಲ್ಲಿ ಪ್ರವೇಶ ನಿರ್ಬಂಧಿಸುವ ಸಾಧ್ಯತೆಯೂ ಉಲ್ಲೇಖವಾಗಿದೆ.

ಇದನ್ನೂ ಓದಿ:

ಈ ಬೆಳವಣಿಗೆಯ ನಡುವೆ, ಇರಾನ್-ಅಮೆರಿಕ-ಇಸ್ರೇಲ್ ನಡುವಿನ ಉದ್ವಿಗ್ನತೆ ಮತ್ತಷ್ಟು ತೀವ್ರಗೊಂಡಿದೆ. ಇತ್ತೀಚೆಗೆ ಇಸ್ಫಹಾನ್ ನಗರದಲ್ಲಿರುವ ಮಿಲಿಟರಿ ಕೇಂದ್ರದ ಮೇಲೆ ಅಮೆರಿಕ-ಇಸ್ರೇಲ್ ಜಂಟಿ ವಾಯುದಾಳಿ ನಡೆದಿದ್ದು, ಭಾರೀ ಸ್ಫೋಟಗಳು ಸಂಭವಿಸಿವೆ.

ಇದಕ್ಕೆ ಪ್ರತಿಯಾಗಿ, ಇಸ್ರೇಲ್‌ನ ಹೈಫಾ ಪ್ರದೇಶದ ತೈಲ ಸಂಸ್ಕರಣಾಗಾರವನ್ನು ಗುರಿಯಾಗಿಸಿಕೊಂಡು ಇರಾನ್ ದಾಳಿ ನಡೆಸಿದೆ. ಘಟನೆಯಲ್ಲಿ ಭಾರೀ ಬೆಂಕಿ ಕಾಣಿಸಿಕೊಂಡಿದ್ದು, ಕಪ್ಪು ಹೊಗೆ ಆಕಾಶವನ್ನು ಆವರಿಸಿದೆ. ಈ ಬೆಳವಣಿಗೆಗಳು ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆಯನ್ನು ಮತ್ತಷ್ಟು ಹೆಚ್ಚಿಸಿವೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !