ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರಧಾನಿ ಮೋದಿ ಅಮೆರಿಕ ಪ್ರವಾಸ ಪೂರ್ಣಗೊಂಡಿದ್ದು, ಅಮೆರಿಕದಿಂದ ಹೊರಡುವ ಮುನ್ನ ಅನಿವಾಸಿ ಭಾರತೀಯರನ್ನು ಉದ್ದೇಶಿಸಿ ಪ್ರಧಾನಿ ಮೋದಿ ಮಾತನಾಡಿದ್ದಾರೆ.
ಅಮೆರಿಕದ ಮೂಲೆ ಮೂಲೆಯಲ್ಲೂ ಭಾರತೀಯರಿದ್ದಾರೆ. ಇಲ್ಲೊಂದು ಮಿನಿ ಭಾರತ ಹೊರಹೊಮ್ಮಿದೆ. ಕಳೆದ ಮೂರು ದಿನದಲ್ಲಿ ನಾನು ಸಾಕಷ್ಟು ಅನುಭವಗಳನ್ನು ಪಡೆದಿದ್ದೇನೆ. ಅಮೆರಿಕದಲ್ಲಿ ನನಗೆ ಸಿಗುತ್ತಿರುವ ಪ್ರೀತಿ ಅದ್ಭುತವಾದ್ದು. ಅಮೆರಿಕ ಅಧ್ಯಕ್ಷ ಜೋ ಬಿಡೆನ್ ಅನುಭವಿ ರಾಜಕಾರಣಿ ಎಂದು ಹಾಡಿ ಹೊಗಳಿದ್ದಾರೆ.
ಅಷ್ಟೇ ಅಲ್ಲದೆ ಭಾರತದ ಪುರಾತನ ವಸ್ತುಗಳನ್ನು ಹಿಂದಿರುಗಿಸಲು ಅಮೆರಿಕ ನಿರ್ಧರಿಸಿದೆ. ಇದು ಖುಷಿಯ ವಿಚಾರ, ಈ ಪುರಾತನ ವಸ್ತುಗಳು ಈಗಾಗಲೇ ಅಂತಾರಾಷ್ಟ್ರೀಯ ಮಾರುಕಟ್ಟೆಯನ್ನು ತಲುಪಿವೆ ಎಂದಿದ್ದಾರೆ. ಭಾರತ-ಅಮೆರಿಕ ಎರಡೂ ದೇಶಗಳು ಉತ್ತಮ ಭವಿಷ್ಯದತ್ತ ಮುನ್ನುಗ್ಗುತ್ತಿವೆ, ಭಾರತದಲ್ಲಿ ಹೂಡಿಕೆ ಮಾಡಲು ಇಲ್ಲಿನ ಸಾಕಷ್ಟು ಕಂಪನಿಗಳು ಉತ್ಸಾಹ ತೋರಿವೆ, ಇದರಿಂದ ಭಾರತಕ್ಕೆ ಸಾಕಷ್ಟು ಅನುಕೂಲವಾಗಲಿದೆ ಎಂದಿದ್ದಾರೆ.