Sunday, January 11, 2026

ಜಗತ್ತಿನ ದೊಡ್ಡಣ್ಣ ಎಂದು ಬಣ್ಣಿಸುವ ಅಮೆರಿಕಕ್ಕೆ ಭಾರತದ ಪ್ರಗತಿ ಒಪ್ಪಿಕೊಳ್ಳಲು ಸಾಧ್ಯವಾಗುತ್ತಿಲ್ಲ: ರಾಜನಾಥ್ ಸಿಂಗ್

ಹೊಸದಿಗಂತ ಡಿಜಿಟಲ್ ಡೆಸ್ಕ್:

‘ಸಬ್ಕೆ ಬಾಸ್’ (ಜಗತ್ತಿನ ದೊಡ್ಡಣ್ಣ) ಎಂದು ಬಣ್ಣಿಸಿಕೊಳ್ಳುವ ಅಮೆರಿಕಕ್ಕೆ ಜಾಗತಿಕ ಶಕ್ತಿಯಾಗಿ ಭಾರತದ ಪ್ರಗತಿಯನ್ನು ಒಪ್ಪಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ವಾಗ್ದಾಳಿ ನಡೆಸಿದ್ದಾರೆ.

ಭಾರತ ಮೇಲೆ ವಿಧಿಸಲಾಗಿರುವ ತೀವ್ರ ಸುಂಕದ ಬೆದರಿಕೆಗಳ ಕುರಿತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಗುರಿಯಾಗಿಸಿಕೊಂಡು ಚಾಟಿ ಬೀಸಿದರು .

ಭಾರತದಲ್ಲಿ ತಯಾರಾದ ಉತ್ಪನ್ನಗಳು ಬೇರೆಡೆ ತಯಾರಾಗುವುದಕ್ಕಿಂತ ಹೆಚ್ಚು ದುಬಾರಿಯಾಗುವಂತೆ ನೋಡಿಕೊಳ್ಳಲು ಅನೇಕರು ಪ್ರಯತ್ನಿಸುತ್ತಿದ್ದಾರೆ. ಇದರಿಂದ ಬೆಲೆಗಳು ಹೆಚ್ಚಾದರೆ ಜಾಗತಿಕ ಖರೀದಿದಾರರನ್ನು ತಡೆಯುವುದು ಯತ್ನ ಎಂದು ರಾಜನಾಥ್ ಸಿಂಗ್ ಹೇಳಿದರು.

ಆದ್ರೆ ಈಗ ವಿಶ್ವದ ಯಾವುದೇ ಶಕ್ತಿಯು ಭಾರತವು ಪ್ರಮುಖ ಜಾಗತಿಕ ಶಕ್ತಿಯಾಗುವುದನ್ನು ತಡೆಯಲು ಸಾಧ್ಯವಿಲ್ಲ ಎಂದು ಪೂರ್ಣ ವಿಶ್ವಾಸದಿಂದ ಪ್ರತಿಪಾದಿಸಿದರು.

ಪ್ರಸ್ತುತ ಪರಿಸ್ಥಿತಿಯು ಭಾರತದ ರಕ್ಷಣಾ ರಫ್ತಿನ ಮೇಲೆ ಪರಿಣಾಮ ಬೀರಿಲ್ಲ. ಅದು ನಿರಂತರವಾಗಿ ಬೆಳೆಯುತ್ತಿದೆ. ದೇಶವು ಈಗ ರೂ.24,000 ಕೋಟಿಗಿಂತ ಹೆಚ್ಚಿನ ಮೌಲ್ಯದ ರಕ್ಷಣಾ ವಸ್ತುಗಳನ್ನು ರಫ್ತು ಮಾಡುತ್ತಿದೆ. ಇದು ಭಾರತದ ರಕ್ಷಣಾ ಕ್ಷೇತ್ರದ ಶಕ್ತಿ ಮತ್ತು ‘ನವ ಭಾರತದ’ ಸಾಮರ್ಥ್ಯಗಳಿಗೆ ಸಾಕ್ಷಿಯಾಗಿದೆ ಎಂದು ಬಣ್ಣಿಸಿದರು. ರಫ್ತುಗಳು ವರ್ಷದಿಂದ ವರ್ಷಕ್ಕೆ ಸ್ಥಿರವಾಗಿ ಏರುತ್ತಿವೆ ಎಂದು ಸಿಂಗ್ ಹೇಳಿದರು.

Related articles

Comments

LEAVE A REPLY

Please enter your comment!
Please enter your name here

ಇತರರಿಗೂ ಹಂಚಿ

Latest articles

Newsletter

error: Content is protected !!