ಹೊಸದಿಗಂತ ಡಿಜಿಟಲ್ ಡೆಸ್ಕ್
ಇಡೀ ವಿಶ್ವವೇ ದೀಪಾವಳಿ ಸಂಭ್ರಮದಲ್ಲಿ ಆಚರಿಸಲು ಸಜ್ಜಾಗುತ್ತಿದ್ದು, ಅಮೆರಿಕದ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಕೂಡ ಭಾರತೀಯರ ಜೊತೆಗೆ ದೀಪಾವಳಿಯನ್ನು ಆಚರಿಸಿ ಖುಷಿಪಟ್ಟಿದ್ದಾರೆ .
ತಮ್ಮ ಅಧಿಕೃತ ನಿವಾಸ-ನೌಕಾ ವೀಕ್ಷಣಾಲಯದಲ್ಲಿ ದೀಪಾವಳಿಯ ಆಚರಣೆ ಮಾಡಿದ್ದಾರೆ. ಅನೇಕರು ಇದು ಭಾರತದ ಸಂಸ್ಕೃತಿಗೆ ಕಮಲಾ ಹ್ಯಾರಿಸ್ ನೀಡಿದ ಗೌರವ ಎಂದು ಬಣ್ಣಿಸಿದ್ದಾರೆ.
ಕಮಲಾ ಹ್ಯಾರಿಸ್ ಶುಕ್ರವಾರ ಅಮೆರಿಕದಲ್ಲಿರುವ ಭಾರತೀಯರ ಜೊತೆಗೆ ದೀಪಾವಳಿ ಮುನ್ನವೇ ತಮ್ಮ ಅಧಿಕೃತ ನಿವಾಸ-ನೌಕಾ ವೀಕ್ಷಣಾಲಯದಲ್ಲಿ ದೀಪಾವಳಿ ಆಚರಣೆಯನ್ನು ಆಯೋಜಿಸಿದರು. ಈ ಸಂಭ್ರಮದಲ್ಲಿ ನೀರಾ ತಾಂಡೇನ್, ವಿವೇಕ್ ಮೂರ್ತಿ, ರಿಚ್ ವರ್ಮಾ ಮತ್ತು ಅಜಯ್ ಭುಟೋರಿಯಾ ಸೇರಿದಂತೆ ಹಲವಾರು ಪ್ರಮುಖ ಭಾರತೀಯರು ಉಪಸ್ಥಿತರಿದ್ದರು.
.@VP and @SecondGentleman during a Diwali Celebration at the VP’s Residence this evening.
🎥: neilmakhija on Instagram. pic.twitter.com/w8wq7tu1PB
— best of kamala harris (@archivekamala) October 22, 2022
ಈ ಸಂಭ್ರಮದಲ್ಲಿ ಕಮಲಾ ಹ್ಯಾರಿಸ್ ಅವರ ಪತಿಯೂ ಭಾಗಿಯಾಗಿದ್ದರು, ಅವರ ಜೊತೆಗೆ ಪಟಾಕಿ ಹೊಡೆದು ಸಂಭ್ರಮಿಸಿದ್ದಾರೆ. ಕಮಲಾ ಹ್ಯಾರಿಸ್ ಅವರ ನಿವಾಸವನ್ನು ದೀಪಗಳಿಂದ ಅಲಂಕಾರ ಮಾಡಿದ್ದು, ಬಂದಿರುವ ಅತಿಥಿಗಳಿಗೆ ವಿವಿಧ ರೀತಿಯ ಭಾರತೀಯ ಭಕ್ಷ್ಯಗಳನ್ನು ಮಾಡಲಾಗಿತ್ತು.
ನಮ್ಮ ಜೀವನದ ದ್ವಂದ್ವತೆ ಸರಿಪಡಿಸಲು ಮತ್ತು ಕತ್ತಲಿನಿಂದ ಬೆಳಕಿನ ಕಡೆ ಸಾಗಲು ಈ ಹಬ್ಬ ಮುಖ್ಯವಾಗಿರುತ್ತದೆ. ಈ ಆಚರಣೆ ಜಗತ್ತಿನ ಒಂದು ದೊಡ್ಡ ಸಂಸ್ಕೃತಿಯಾಗಿದೆ. ನಮ್ಮ ಕತ್ತಲಿನ ಜೀವನಕ್ಕೆ ಒಂದು ಬೆಳಕಿನ ಮಾರ್ಗದರ್ಶನ ನೀಡುವ ಕೆಲಸ ಆಗಬೇಕು. ನಮ್ಮ ಜೀವನದ ಪ್ರತಿಕ್ಷಣವು ಒಳ್ಳೆಯದ್ದನ್ನೇ ಯೋಚನೆ ಮಾಡಬೇಕು ಎಂದು ಕಮಲಾ ಹ್ಯಾರಿಸ್ ಹೇಳಿದರು.