ಹೊಸದಿಗಂತ ಡಿಜಿಟಲ್ ಡೆಸ್ಕ್:
ಇರಾನ್‌ನಲ್ಲಿ ಆರ್ಥಿಕ ಬಿಕ್ಕಟ್ಟು ಮತ್ತು ಕರೆನ್ಸಿ ಮೌಲ್ಯ ಕುಸಿತದಿಂದಾಗಿ ಪ್ರಾರಂಭವಾದ ಪ್ರತಿಭಟನೆಗಳು ಬೃಹತ್ ಕ್ರಾಂತಿಯ ಸ್ವರೂಪ ಪಡೆದುಕೊಂಡಿವೆ.ಉದ್ಯಮಿಗಳು, ಮಹಿಳೆಯರಿಂದ ಹಿಡಿದು ಸಾಮಾನ್ಯ ಜನರವರೆಗೆ ಸಾವಿರಾರು ಜನರು ಈ ಪ್ರತಿಭಟನೆಯಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದಾರೆ.
ನಗರ ಕೇಂದ್ರಗಳಿಗೆ ಮುತ್ತಿಗೆ ಹಾಕಲು ಸಜ್ಜಾಗುವಂತೆ 1979 ರ ಇಸ್ಲಾಮಿಕ್ ಕ್ರಾಂತಿಯ ಸಮಯದಲ್ಲಿ ಅಧಿಕಾರದಿಂದ ತೆಗೆದುಹಾಕಲ್ಪಟ್ಟ ಇರಾನ್‌ನ ಕೊನೆಯ ಷಾ ಮೊಹಮ್ಮದ್ ರೆಜಾ ಪಹ್ಲವಿ ಅವರ ಮಗ, ದೇಶಭ್ರಷ್ಟ ಕ್ರೌನ್ ಪ್ರಿನ್ಸ್ ರೆಜಾ ಪಹ್ಲವಿ ಪ್ರತಿಭಟನಾಕಾರರಿಗೆ ಶನಿವಾರ ಕರೆ ನೀಡಿದ್ದಾರೆ.
ಇನ್ನು ಮುಂದೆ ಬೀದಿಗಿಳಿಯುವುದು ನಮ್ಮ ಗುರಿ ಇಲ್ಲ. ನಗರ ಕೇಂದ್ರಗಳ ವಶಕ್ಕೆ ಸಜ್ಜಾಗುವುದು ನಮ್ಮ ಗುರಿಯಾಗಿದೆ ಎಂದು ಯುಎಸ್ ಮೂಲದ ರೆಜಾ ಪಹ್ಲವಿ ಹೇಳಿದ್ದಾರೆ. ಶುಕ್ರವಾರದ ಪ್ರತಿಭಟನೆಯನ್ನು ಶ್ಲಾಘಿಸಿದ್ದು, ಇಂದು ಮತ್ತು ನಾಳೆ ಮತ್ತಷ್ಟು ಹೆಚ್ಚಿನದಾಗಿ ಪ್ರತಿಭಟನೆ ನಡೆಸಬೇಕು ಎಂದು ಅವರು ಕರೆ ನೀಡಿದ್ದಾರೆ.
ಮತ್ತೊಂದೆಡೆ ಮೂಲಸೌಕರ್ಯ ಮತ್ತು ಸಾರ್ವಜನಿಕ ಆಸ್ತಿ ರಕ್ಷಣೆ ತನ್ನ ಆದ್ಯತೆಯಾಗಿದೆ ಎಂದು ಇರಾನ್ ಸೇನೆ ಹೇಳಿದೆ.
ಶತ್ರುಗಳ ಸಂಚುಗಳನ್ನು ವಿಫಲಗೊಳಿಸುವಂತೆ ಇರಾನಿಯನ್ನರನ್ನು ಒತ್ತಾಯಿಸಿದೆ. ಪಹ್ಲವಿ ಅವರನ್ನು ಭೇಟಿ ಮಾಡಲು ಒಲವು ಹೊಂದಿಲ್ಲ ಎಂದು ಗುರುವಾರ ಟ್ರಂಪ್ ಹೇಳುವ ಮೂಲಕ ಕಾದು ನೋಡುವ ತಂತ್ರ ಅನುಸರಿಸಿದ್ದರು. ದೇಶದಲ್ಲಿನ ವಿಧ್ವಂಸಕ ವಿರುದ್ಧ ಖಮೇನಿ ಶುಕ್ರವಾರ ಕಿಡಿಕಾರಿದ್ದರು. ನಮ್ಮ ದೇಶ ಟ್ರಂಪ್ ರೀತಿಯ ವಿಧ್ವಂಸಕರ ಮುಂದೆ ಎಂದಿಗೂ ಹಿಂದೆ ಸರಿಯುವುದಿಲ್ಲ ಎಂದು ಪ್ರತಿಜ್ಞೆ ಮಾಡಿದ್ದರು.

