May 18, 2026
Monday, May 18, 2026
spot_img

ಇಸ್ರೇಲ್-ಅಮೆರಿಕ ಜಂಟಿ ದಾಳಿ: ಚಿಕಿತ್ಸೆ ಫಲಿಸದೆ ಖಮೇನಿ ಪತ್ನಿ ಮನ್ಸೌರೆ ಖೋಜಸ್ತೇ ನಿಧನ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇರಾನ್ ಮೇಲೆ ನಡೆದ ಭೀಕರ ವಾಯುದಾಳಿಯ ಸರಣಿ ದುರಂತಗಳು ಮುಂದುವರಿದಿವೆ. ಅಮೆರಿಕ ಮತ್ತು ಇಸ್ರೇಲ್ ನಡೆಸಿದ ಜಂಟಿ ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಇರಾನ್‌ನ ಸರ್ವೋಚ್ಚ ನಾಯಕ ಅಲಿ ಖಮೇನಿ ಅವರ ಪತ್ನಿ ಮನ್ಸೌರೆ ಖೋಜಸ್ತೆಹ್ (78) ಅವರು ಇಂದು ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.

ಕೇವಲ ಎರಡು ದಿನಗಳ ಹಿಂದಷ್ಟೇ ನಡೆದ ಕ್ಷಿಪಣಿ ದಾಳಿಯಲ್ಲಿ ಅಲಿ ಖಮೇನಿ ಸೇರಿದಂತೆ ಅವರ ಪುತ್ರಿ, ಅಳಿಯ ಹಾಗೂ ಮೊಮ್ಮಗಳು ಸಾವನ್ನಪ್ಪಿದ್ದರು. ಇಡೀ ಕುಟುಂಬವನ್ನೇ ಬಲಿಪಡೆದ ಈ ದಾಳಿಯಲ್ಲಿ ಬದುಕುಳಿದಿದ್ದ ಮನ್ಸೌರೆ ಅವರು ಟೆಹ್ರಾನ್‌ನ ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದರು. ಇಂದು ಅವರು ಕೊನೆಯುಸಿರೆಳೆದಿದ್ದಾರೆ ಎಂದು ಇರಾನ್ ಮಾಧ್ಯಮ ಮೂಲಗಳು ತಿಳಿಸಿವೆ.

ಭವಿಷ್ಯದ ದಾಳಿಗಳನ್ನು ಎದುರಿಸಲು ಇರಾನ್ ಚೀನಾದಿಂದ ಅತ್ಯಾಧುನಿಕ HQ-9B ಏರ್ ಡಿಫೆನ್ಸ್ ಸಿಸ್ಟಂ ಅನ್ನು ಖರೀದಿಸಿತ್ತು. ಆದರೆ, ಅಮೆರಿಕ ಮತ್ತು ಇಸ್ರೇಲ್‌ನ ಯುದ್ಧ ವಿಮಾನಗಳನ್ನು ಪತ್ತೆಹಚ್ಚುವಲ್ಲಿ ಈ ರಕ್ಷಣಾ ವ್ಯವಸ್ಥೆ ಸಂಪೂರ್ಣವಾಗಿ ವಿಫಲವಾಗಿದೆ. ಈ ತಾಂತ್ರಿಕ ವೈಫಲ್ಯವೇ ಇರಾನ್‌ನ ಟಾಪ್ ಕಮಾಂಡರ್‌ಗಳು ಮತ್ತು ಖಮೇನಿ ಕುಟುಂಬದ ಅಳಿವಿಗೆ ಕಾರಣವಾಯಿತು ಎನ್ನಲಾಗುತ್ತಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !