ಕೋವಿಡ್ ಭೀತಿ ನಡುವೆ ಕೊರೋನಾ ನಿರ್ಬಂಧ ತೆರವುಗೊಳಿಸಿದ ಇಂಡೋನೇಷ್ಯಾ!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಚೀನಾ ಸೇರಿದಂತೆ ವಿವಿಧ ದೇಶಗಳಲ್ಲಿ ಕೊರೋನಾ ಪ್ರಕರಣಗಳು ಹೆಚ್ಚಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಭಾರತ ಸೇರಿದಂತೆ ಅನೇಕ ದೇಶಗಳು ಮುನ್ನೆಚ್ಚಾರಿಕಾ ಕ್ರಮಗಳನ್ನು ಕೈಗೊಳ್ಳುತ್ತಿವೆ. ಇದರ ನಡುವೆಯೇ ಇಂಡೋನೇಷ್ಯಾ ಮಾತ್ರ ಒಳಾಂಗಣಗಳಲ್ಲಿ ಮಾಸ್ಕ್ ಧರಿಸುವ ಹಾಗೂ ವ್ಯಾಕ್ಸಿನೇಷನ್ ಸರ್ಟಿಫಿಕೇಟ್ ಕಡ್ಡಾಯಗೊಳಿದ್ದ ಆದೇಶಗಳನ್ನು ತೆರವುಗೊಳಿಸಿದೆ.

ಹೊಸ ನಿಯಮಗಳು ಶುಕ್ರವಾರದಿಂದ ಜಾರಿಗೆ ಬಂದಿದ್ದು , ಇಂಡೋನೇಷ್ಯಾದ ಬಹುತೇಕ ಎಲ್ಲಾ ಜನರು ವೈರಸ್ ವಿರುದ್ಧ ರೋಗನಿರೋಧಕ ಶಕ್ತಿಯನ್ನು ಹೊಂದಿರುವುದರಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಅಧ್ಯಕ್ಷ ಜೋಕೊ ವಿಡೋಡೊ ಹೇಳಿದ್ದಾರೆ.

ಸದ್ಯ ಕೋವಿಡ್ ನಿಯಂತ್ರಣದಲ್ಲಿದೆ. ಹೀಗಾಗಿ ನಿಯಮಗಳನ್ನು ಸಡಿಲಗೊಳಿಸಲಾಗಿದೆ. ಇಂಡೋನೇಷ್ಯಾ ಹೊಸ ಪ್ರಯಾಣದ ನಿರ್ಬಂಧ ವಿಧಿಸುವುದಿಲ್ಲ ಎಂದು ಜೋಕೋ ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!