March 22, 2026
Sunday, March 22, 2026
spot_img

ಗೆಲುವಿನ ಸಂಭ್ರಮದ ನಡುವೆ ಟೀಮ್ ಇಂಡಿಯಾಗೆ ‘ಜ್ವರ’ದ ಬಿಸಿ: ಇಬ್ಬರು ಸ್ಟಾರ್ ಆಟಗಾರರು ಡೌಟ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಅಮೆರಿಕ ವಿರುದ್ಧದ ಪಂದ್ಯದಲ್ಲಿ 29 ರನ್‌ಗಳ ಭರ್ಜರಿ ಜಯ ದಾಖಲಿಸುವ ಮೂಲಕ ಟೀಮ್ ಇಂಡಿಯಾ ತನ್ನ ವಿಶ್ವಕಪ್ ಅಭಿಯಾನವನ್ನು ಶುಭಾರಂಭ ಮಾಡಿದೆ. ಆದರೆ, ಈ ಸಂಭ್ರಮದ ನಡುವೆಯೇ ತಂಡಕ್ಕೆ ಪ್ರಮುಖ ಆಟಗಾರರ ಅನಾರೋಗ್ಯದ ಚಿಂತೆ ಎದುರಾಗಿದೆ.

ಗೆಲುವಿನ ಖುಷಿಯಲ್ಲಿದ್ದ ಭಾರತೀಯ ಅಭಿಮಾನಿಗಳಿಗೆ ಜಸ್​ಪ್ರೀತ್ ಬುಮ್ರಾ ಮತ್ತು ಅಭಿಷೇಕ್ ಶರ್ಮಾ ಅವರ ಆರೋಗ್ಯ ಸ್ಥಿತಿ ಅತಂತ್ರವಾಗಿರುವುದು ಅತೃಪ್ತಿ ತಂದಿದೆ.

ತೀವ್ರ ಜ್ವರದಿಂದ ಬಳಲುತ್ತಿರುವ ಕಾರಣ ಬುಮ್ರಾ ಅಮೆರಿಕ ವಿರುದ್ಧದ ಪಂದ್ಯದಿಂದ ಹೊರಗುಳಿದಿದ್ದರು. ತಂಡದ ಪ್ರಮುಖ ವೇಗಿಯ ಅನುಪಸ್ಥಿತಿ ಮುಂದಿನ ಪಂದ್ಯಗಳಿಗೆ ಎಫೆಕ್ಟ್ ನೀಡುವ ಸಾಧ್ಯತೆಯಿದೆ.

ಆರಂಭಿಕ ಆಟಗಾರನಾಗಿ ಕಣಕ್ಕಿಳಿದಿದ್ದ ಅಭಿಷೇಕ್ ಶರ್ಮಾ, ಬ್ಯಾಟಿಂಗ್ ಮುಗಿದ ಬಳಿಕ ಫೀಲ್ಡಿಂಗ್‌ಗೆ ಬರಲಿಲ್ಲ. ಅವರೂ ಕೂಡ ಅನಾರೋಗ್ಯದ ಸಮಸ್ಯೆಯಿಂದ ಬಳಲುತ್ತಿರುವುದು ಈಗ ದೃಢಪಟ್ಟಿದೆ.

ಇದನ್ನೂ ಓದಿ:

ಫೆಬ್ರವರಿ 12 ರಂದು ನಡೆಯಲಿರುವ ನಮೀಬಿಯಾ ವಿರುದ್ಧದ ಪಂದ್ಯದ ವೇಳೆಗೆ ಇವರಿಬ್ಬರೂ ಚೇತರಿಸಿಕೊಳ್ಳದಿದ್ದರೆ, ತಂಡದಲ್ಲಿ ಮಹತ್ವದ ಬದಲಾವಣೆಗಳಾಗಲಿವೆ. ಜಸ್​ಪ್ರೀತ್ ಬುಮ್ರಾ ಬದಲಿಗೆ ಮೊಹಮ್ಮದ್ ಸಿರಾಜ್ ಮತ್ತು ಅಭಿಷೇಕ್ ಶರ್ಮಾ ಬದಲಿಗೆ ಸಂಜು ಸ್ಯಾಮ್ಸನ್ ಅಂತಿಮ 11ರ ಬಳಗದಲ್ಲಿ ಸ್ಥಾನ ಪಡೆಯುವ ಸಾಧ್ಯತೆ ದಟ್ಟವಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !