ಗಾಯಕಿ ಅಶಾ ಭೋಸ್ಲೆಯ ‘ಅಭಿ ನಾ ಜಾವೋ ಚೋಡ್ಕರ್’ ಹಾಡಿಗೆ ಮನಸೋತ ಅಮಿತ್ ಶಾ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾಲಿವುಡ್ ದಿಗ್ಗಜ ಗಾಯಕಿ ಅಶಾ ಭೋಸ್ಲೆ ಅವರನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಭೇಟಿಯಾಗಿದ್ದಾರೆ.

ಈ ಭೇಟಿ ವೇಳೆ ಅಶಾ ಭೋಸ್ಲಾ 1961ರ ದಶಕಗ ಬಾಲಿವುಡ್‌ನ ಜನಪ್ರಿಯ ‘ಅಭಿ ನಾ ಜಾವೋ ಚೋಡ್ಕರ್’ ಹಾಡು ಹಾಡಿದ್ದು, ಹಾಡು ಮೆಚ್ಚಿದ ಅಮಿತ್ ಶಾ ಅಭಿನಂದಿಸಿದ್ದಾರೆ.

ಮುಂಬೈನಲ್ಲಿ ಅಶಾ ಭೋಸ್ಲೆ ಅವರ ಅತ್ಯುತ್ತಮ ಫೋಟೋಗಳ ಸರಮಾಲೆಯನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಅನಾವರಣ ಮಾಡಿದ್ದಾರೆ. ಈ ವೇಳೆ ಆಶಾ ಭೋಸ್ಲೆ ಹಾಗೂ ಅಮಿತ್ ಶಾ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.
ಅಶಾ ಭೋಸ್ಲೆ ಮೊಮ್ಮಗಳು ಕೂಡ ಈ ವೇಳ ಹಾಜರಿದ್ದರು. 1961ರ ಹಮ್ ದೋನೋ ಬಾಲಿವುಡ್ ಚಿತ್ರದ ಅಭಿ ನಾ ಜಾವೋ ಚೋಡ್ಕರ್ ಹಾಡನ್ನು ಹಾಡಿದ್ದಾರೆ.

ಅಶಾ ಭೋಸ್ಲೆ ಭೇಟಿ ಕುರಿತು ಅಮಿತ್ ಶಾ ಸಂತಸ ಹಂಚಿಕೊಂಡಿದ್ದಾರೆ. ಅಶಾ ಜಿಯನ್ನು ಭೇಟಿಯಾಗುವುದು ಯಾವತ್ತೂ ಅತ್ಯಂತ ಸಂತಸ ಹಾಗೂ ಆಹ್ಲಾದಕರ. ಇಂದು ಮುಂಬೈನಲ್ಲಿ ಅಶಾ ಜೀ ಅವರೊಂದಿಗೆ ಭಾರತೀಯ ಸಂಗೀತ, ಸಂಸ್ಕೃತಿ ಕುರಿತು ಅತ್ಯುತ್ತ ಚರ್ಚೆ ಮಾಡಿದ್ದೇನೆ. ಅವರು ಎಲ್ಲರಿಗೂ ಸ್ಪೂರ್ತಿಯಾಗಿದ್ದಾರೆ. ಅವರ ಸುಮುಧುರ ಧ್ವನಿ ಸಂಗೀತ ಕ್ಷೇತ್ರಕ್ಕೆ ಆಶೀರ್ವಾದವಾಗಿದೆ ಎಂದು ಅಮಿತ್ ಶಾ ಟ್ವೀಟ್ ಮಾಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!