ಛತ್ತೀಸ್‌ಗಢ ಸಿಎಂ ಸರ್ಕಾರದ ಆರೋಪ್ ಪತ್ರ ಬಿಡುಗಡೆ ಮಾಡಿದ ಅಮಿತ್ ಶಾ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಛತ್ತೀಸ್‌ಗಢ ಸರ್ಕಾರದ ವಿರುದ್ಧ ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah)ಶನಿವಾರ “ಆರೋಪ್ ಪತ್ರ” (ಆರೋಪ ಪತ್ರ) ಬಿಡುಗಡೆ ಮಾಡಿದ್ದಾರೆ.

ಸಿಎಂ ಭೂಪೇಶ್ ಬಘೇಲ್ ಸರ್ಕಾರ ಹಗರಣ ಮತ್ತು ಲೂಟಿಯಲ್ಲಿ ತೊಡಗಿದೆ. ಇದು ರಾಜ್ಯದ ಜನರ ವಿರುದ್ಧ ದೌರ್ಜನ್ಯ ಎಸಗುತ್ತಿದೆ ಎಂದು ಶಾ ಆರೋಪಿಸಿದ್ದಾರೆ.
ಕಾಂಗ್ರೆಸ್ ಸರ್ಕಾರ ಛತ್ತೀಸ್‌ಗಢವನ್ನು “ಗಾಂಧಿ ಪರಿವಾರದ ಎಟಿಎಂ” ಆಗಿ ಮಾಡಿದ್ದಾರೆ, ಈ ಸರ್ಕಾರ ಎಲ್ಲಾ ಭ್ರಷ್ಟಾಚಾರದ ದಾಖಲೆಗಳನ್ನು ಮುರಿದಿದೆ ಎಂದು ಹೇಳಿದ್ದಾರೆ.

ರಾಜ್ಯದಲ್ಲಿ ಕೇಂದ್ರೀಯ ಸಂಸ್ಥೆಗಳು ತನಿಖೆ ನಡೆಸುತ್ತಿರುವ ಕಲ್ಲಿದ್ದಲು, ಮದ್ಯ, ಆನ್‌ಲೈನ್ ಬೆಟ್ಟಿಂಗ್‌ಗೆ ಸಂಬಂಧಿಸಿದ ಆಪಾದಿತ ಹಗರಣಗಳನ್ನು ಶಾ ಪಟ್ಟಿ ಮಾಡಿದ್ದು, ಕಾಂಗ್ರೆಸ್‌ನ ಹಗರಣಗಳು, ದೌರ್ಜನ್ಯಗಳು ಮತ್ತು ದುರಾಡಳಿತದಿಂದ ಛತ್ತೀಸ್‌ಗಢವನ್ನು ಬಿಜೆಪಿ ಮಾತ್ರ ಉಳಿಸಬಹುದು ಎಂದಿದ್ದಾರೆ.

ಈ ವೇಳೆ ಅಕ್ರಮ ಬೆಟ್ಟಿಂಗ್ ಆ್ಯಪ್ ‘ಮಹದೇವ್ ಆನ್‌ಲೈನ್ ಬುಕ್’ಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣವನ್ನು ಉಲ್ಲೇಖಿಸಿದ ಅವರು, ಯುವಕರನ್ನು ಆನ್‌ಲೈನ್ ಬೆಟ್ಟಿಂಗ್‌ಗೆ ತಳ್ಳುತ್ತಿರುವ ಬಘೇಲ್ ಸರ್ಕಾರ ಛತ್ತೀಸ್‌ಗಢದ ಜನರಿಗೆ ಬೇಕೇ ಅಥವಾ ಯುವಕರ ಅಭಿವೃದ್ಧಿಯ ಕೆಲಸವನ್ನು ಮಾಡುವ ಬಿಜೆಪಿ ಸರ್ಕಾರ ಬೇಕೇ ಎಂದು ಕೇಳಿದ್ದಾರೆ.

ಧಾರ್ಮಿಕ ಮತಾಂತರಗಳು ಪ್ರವರ್ಧಮಾನಕ್ಕೆ ಬರುತ್ತಿದ್ದರೂ ಆದಿವಾಸಿಗಳ ಹಕ್ಕುಗಳನ್ನು ರಕ್ಷಿಸುವ ಬಗ್ಗೆ ಮಾತನಾಡುವ ಬಘೇಲ್ ಸರ್ಕಾರ ಬೇಕೋ ಅಥವಾ ಆದಿವಾಸಿಗಳು ಮತ್ತು ಅವರ ಸಂಸ್ಕೃತಿಯನ್ನು ರಕ್ಷಿಸುವ ಮತ್ತು ಸಂರಕ್ಷಿಸುವ ಬಿಜೆಪಿ ಸರ್ಕಾರ ಬೇಕೋ ಎಂಬುದನ್ನು ನೀವು ನಿರ್ಧರಿಸಬೇಕು ಎಂದು ಅಮಿತ್ ಶಾ ಛತ್ತೀಸ್‌ಗಢದ ಜನರಲ್ಲಿ ಹೇಳಿದ್ದಾರೆ.

ಬಿಜೆಪಿ ಅಧಿಕಾರಕ್ಕೆ ಬಂದರೆ ಭ್ರಷ್ಟಾಚಾರ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‌ಡಿಎ) ಸರ್ಕಾರ ಮತ್ತೆ ಅಧಿಕಾರಕ್ಕೆ ಬರಲಿದೆ. ಅದಕ್ಕೂ ಮೊದಲು ಛತ್ತೀಸ್‌ಗಢದಲ್ಲಿ ಬಿಜೆಪಿ ಪೂರ್ಣ ಬಹುಮತದೊಂದಿಗೆ ಸರ್ಕಾರ ರಚಿಸಲಿದೆ ಎಂದು ಕೇಂದ್ರ ಗೃಹ ಸಚಿವರು ಹೇಳಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!