ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಬಾಸಾಹೇಬ್ ಅಂಬೇಡ್ಕರ್ ಕುರಿತು ಕೇಂದ್ರ ಗೃಹ ಸಚಿವರ ಹೇಳಿಕೆ ವಿವಾದದ ನಡುವೆಯೇ, ರಾಷ್ಟ್ರೀಯ ಜನತಾ ದಳದ ಮುಖ್ಯಸ್ಥ ಲಾಲು ಯಾದವ್ ಅವರು ಅಮಿತ್ ಶಾ ರಾಜಕೀಯ ತ್ಯಜಿಸಿ ಹೊರಹೋಗಬೇಕು ಎಂದು ಹೇಳಿದ್ದಾರೆ.
ಅಮಿತ್ ಶಾಗೆ ಹುಚ್ಚು ಹಿಡಿದಿದೆ. ಅವರಿಗೆ ಬಾಬಾಸಾಹೇಬ್ ಅಂಬೇಡ್ಕರ್ ಮೇಲೆ ದ್ವೇಷವಿರಬೇಕು. ಅವರ ಈ ಹುಚ್ಚುತನವನ್ನು ನಾವು ಖಂಡಿಸುತ್ತೇವೆ. ಅವರು ರಾಜಕೀಯ ತ್ಯಜಿಸಿ ಬಿಡಬೇಕು ಎಂದು ಲಾಲು ಯಾದವ್ ಹೇಳಿದ್ದಾರೆ.
ಇದಕ್ಕೂ ಮೊದಲು, ಬಿಹಾರದ ಮಾಜಿ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ವಾಗ್ದಾಳಿ ನಡೆಸಿದರು ಮತ್ತು ಅವರ ಪಕ್ಷವು ಸಂವಿಧಾನ ವಿರೋಧಿ ಮತ್ತು ದ್ವೇಷವನ್ನು ಹರಡುತ್ತಿದೆ ಎಂದು ಆರೋಪಿಸಿದರು.