ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಸ್ಸಾಂನಲ್ಲಿ ಚುನಾವಣಾ ಪ್ರಚಾರಕ್ಕೆ ಹೊರಟಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಹೆಲಿಕಾಪ್ಟರ್ ನಲ್ಲಿ ತಾಂತ್ರಿಕ ಸಮಸ್ಯೆ ಕಾಣಿಸಿಗೊಂಡಿದ್ದು, ಇದರ ಪರಿಣಾಮ ಗೋಲಕ್ಗುಂಜ್ನ ಇಳಿಯಲು ವಿಫಲವಾಗಿದ್ದು, ಹೀಗಾಗಿ ಅಲ್ಲಿ ನಡೆಯಬೇಕಿದ್ದ ರ್ಯಾಲಿಯನ್ನು ರದ್ದುಗೊಳಿಸಲಾಗಿದೆ.
ಈ ಹಿನ್ನೆಲೆ ಅಮಿತ್ ಶಾ ಅವರು ಫೋನ್ ಮೂಲಕ ಕಾರ್ಯಕರ್ತರಲ್ಲಿ ಕ್ಷಮೆಯಾಚಿಸಿದ್ದು, ಅಲ್ಲಿನ ಬಿಜೆಪಿ ಅಭ್ಯರ್ಥಿ ಅಶ್ವಿನಿ ರೇ ಸರ್ಕಾರ್ ಅವರಿಗೆ ಮತ ಹಾಕುವ ಮೂಲಕ ಸಿಎಂ ಹಿಮಂತ ಬಿಸ್ವಾ ಶರ್ಮಾ ಹಾಗೂ ಪ್ರಧಾನಿ ಮೋದಿ ಅವರಿಗೆ ಬೆಂಬಲಿಸುವ ಕರೆ ನೀಡಿದರು.
ಗೋಲಕ್ಗುಂಜ್ನಲ್ಲಿ ರ್ಯಾಲಿ ರದ್ದುಗೊಂಡಿರುವ ಕಾರಣ ಶಾ, ಮತ್ತೊಂದು ಪ್ರಚಾರ ಕಾರ್ಯಕ್ರಮಕ್ಕಾಗಿ ದುಧ್ನೋಯ್ಗೆ ಪ್ರಯಾಣ ಬೆಳೆಸಿದರು.



