July 16, 2026
Thursday, July 16, 2026
spot_img

FOOD | ಪ್ರೋಟೀನ್‌ ರಿಚ್ ಲಂಚ್‌ಗೆ ರುಚಿಯಾದ ಮಶ್ರೂಮ್‌ ಆಮ್ಲೆಟ್‌

ಮಧ್ಯಾಹ್ನದ ಊಟಕ್ಕೆ ಸಿಂಪಲ್ ಆದರೆ ಪ್ರೋಟೀನ್ ತುಂಬಿರುವ ಒಂದು ರುಚಿಯಾದ ಸೈಡ್ ಡಿಶ್ ಬೇಕೆಂದರೆ ಮಶ್ರೂಮ್‌ ಆಮ್ಲೆಟ್‌ ಟ್ರೈ ಮಾಡಿ. ಮೊಟ್ಟೆಯಲ್ಲಿರುವ ಉತ್ತಮ ಗುಣಮಟ್ಟದ ಪ್ರೋಟೀನ್ ಮತ್ತು ಮಶ್ರೂಮ್‌ನಲ್ಲಿರುವ ಪೋಷಕಾಂಶಗಳು ದೇಹಕ್ಕೆ ಶಕ್ತಿ ನೀಡುವುದಲ್ಲದೆ, ಹೊಟ್ಟೆ ತುಂಬಿದ ಅನುಭವವನ್ನು ಹೆಚ್ಚು ಸಮಯ ಕೊಡುತ್ತವೆ. ವಿಶೇಷವಾಗಿ ತೂಕ ಇಳಿಕೆ ಅಥವಾ ಫಿಟ್ನೆಸ್‌ ಡೈಟ್ ಪಾಲಿಸುವವರಿಗೆ ಇದು ಉತ್ತಮ ಲಂಚ್ ಕಾಂಬಿನೇಶನ್. ಅನ್ನ, ಚಪಾತಿ ಅಥವಾ ರೊಟ್ಟಿಯ ಜೊತೆ ಇದನ್ನು ಸೈಡ್ ಡಿಶ್ ಆಗಿ ಸವಿದರೆ ತುಂಬಾ ರುಚಿ.

ಬೇಕಾಗುವ ಪದಾರ್ಥಗಳು

ಮೊಟ್ಟೆ – 3
ಮಶ್ರೂಮ್‌ – 1 ಕಪ್
ಈರುಳ್ಳಿ – 1 ಸಣ್ಣದು
ಹಸಿಮೆಣಸಿನಕಾಯಿ – 1
ಮೆಣಸಿನ ಪುಡಿ – ¼ ಟೀ ಸ್ಪೂನ್
ಕಾಳು ಮೆಣಸು ಪುಡಿ – ¼ ಟೀ ಸ್ಪೂನ್
ಉಪ್ಪು – ರುಚಿಗೆ ತಕ್ಕಷ್ಟು
ಕೊತ್ತಂಬರಿ ಸೊಪ್ಪು – 1 ಟೇಬಲ್ ಸ್ಪೂನ್
ಎಣ್ಣೆ ಅಥವಾ ತುಪ್ಪ – 1 ಟೀ ಸ್ಪೂನ್

ಮಾಡುವ ವಿಧಾನ

ಮೊದಲು ಪ್ಯಾನ್‌ಗೆ ಸ್ವಲ್ಪ ಎಣ್ಣೆ ಹಾಕಿ ಬಿಸಿ ಮಾಡಿ. ಅದಕ್ಕೆ ಕತ್ತರಿಸಿದ ಈರುಳ್ಳಿ ಮತ್ತು ಹಸಿಮೆಣಸಿನಕಾಯಿ ಹಾಕಿ ಸ್ವಲ್ಪ ಬಾಡಿಸಿ. ನಂತರ ಮಶ್ರೂಮ್‌ ಹಾಕಿ 2–3 ನಿಮಿಷ ಸಾಟ್ ಮಾಡಿ. ಮಶ್ರೂಮ್‌ನ ನೀರು ಒಣಗಿದ ಬಳಿಕ ಸ್ವಲ್ಪ ಉಪ್ಪು ಮತ್ತು ಕಾಳು ಮೆಣಸು ಪುಡಿ ಸೇರಿಸಿ.

ಒಂದು ಬೌಲ್‌ನಲ್ಲಿ ಮೊಟ್ಟೆಗಳನ್ನು ಒಡೆದು ಚೆನ್ನಾಗಿ ಬೀಟ್ ಮಾಡಿ. ಅದಕ್ಕೆ ಮೆಣಸಿನ ಪುಡಿ, ಸ್ವಲ್ಪ ಉಪ್ಪು ಮತ್ತು ಕೊತ್ತಂಬರಿ ಸೊಪ್ಪು ಸೇರಿಸಿ. ಈಗ ಈ ಮಿಶ್ರಣವನ್ನು ಪ್ಯಾನ್‌ನಲ್ಲಿರುವ ಮಷ್ರೂಮ್ ಮೇಲೆ ಸುರಿದು ಮುಚ್ಚಿ ಮಧ್ಯಮ ಉರಿಯಲ್ಲಿ ಬೇಯಿಸಿ.

ಒಂದು ಬದಿ ಬೇಯಿದ ನಂತರ ನಿಧಾನವಾಗಿ ತಿರುಗಿಸಿ ಇನ್ನೊಂದು ಬದಿಯನ್ನೂ ಬೇಯಿಸಿ. ಗೋಲ್ಡನ್ ಕಲರ್ ಬಂದರೆ ಮಶ್ರೂಮ್‌ ಆಮ್ಲೆಟ್‌ ರೆಡಿ.

ಇದನ್ನು ಬಿಸಿ ಬಿಸಿ ಅನ್ನ, ಚಪಾತಿ ಅಥವಾ ಸಲಾಡ್ ಜೊತೆ ಲಂಚ್‌ಗೆ ಸರ್ವ್ ಮಾಡಿ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !