‘ಹೃದಯ ಬಡಿಯುತ್ತಿದೆ.. ಕಾಳಜಿ ಜೊತೆಗೆ ಭರವಸೆ ಇದೆ’: ಅಮಿತಾಭ್​​​ ಬಚ್ಚನ್ ಟ್ವೀಟ್ ವೈರಲ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಬಾಲಿವುಡ್​ನ ಹಿರಿಯ ನಟ ಅಮಿತಾಭ್​​​ ಬಚ್ಚನ್ ಈ ಒಂದು ಟ್ವೀಟ್ ಇದೀಗ ಭಾರೀ ವೈರಲ್ ಆಗಿದ್ದು, ಅಭಿಮಾನಿಗಳಲ್ಲಿ ಆತಂಕ ಮೂಡಿಸಿದೆ.
ನಿನ್ನೆ ರಾತ್ರಿ ಟ್ವೀಟರ್​​ನಲ್ಲಿ ‘ಹೃದಯ ಬಡಿಯುತ್ತಿದೆ.. ಕಾಳಜಿ ಜೊತೆಗೆ ಭರವಸೆ ಇದೆ’ ಎಂದು ಅಮಿತಾಭ್​ ಬಚ್ಚನ್​ ಬರೆದುಕೊಂಡಿದ್ದು, ಟ್ವೀಟ್ ಕಂಡು ಅಭಿಮಾನಿಗಳು ಆರೋಗ್ಯದ ಬಗ್ಗೆ ನಿಗಾವಹಿಸಿ, ಆದಷ್ಟು ಬೇಗ ಚೇತರಿಸಿಕೊಳ್ಳಿ ಎಂಬ ಸಂದೇಶ ರವಾನೆ ಮಾಡಿದ್ದಾರೆ.
ಯಾವ ಕಾರಣಕ್ಕಾಗಿ ಈ ರೀತಿಯಾಗಿ ಟ್ವೀಟ್ ಮಾಡಿದ್ದಾರೆಂಬುದರ ಬಗ್ಗೆ ಈವರೆಗೆ ಯಾವುದೇ ರೀತಿಯ ಖಚಿತ ಮಾಹಿತಿ ಲಭ್ಯವಾಗಿಲ್ಲ
ಅಮಿತಾಭ್​ ಬಚ್ಚನ್​​​ಗೆ 79 ವರ್ಷ ವಯಸ್ಸಾಗಿದ್ದು, ಕಳೆದ ಕೆಲ ವರ್ಷಗಳಿಂದ ಆರೋಗ್ಯಕ್ಕೆ ಸಂಬಂಧಿಸಿರುವ ಸಣ್ಣ-ಪುಟ್ಟ ಸಮಸ್ಯೆ ಎದುರಿಸುತ್ತಿದ್ದಾರೆ. ಇದರ ಮಧ್ಯೆ ಕೂಡ ಅವರು ಅನೇಕ ಚಿತ್ರಗಳಲ್ಲಿ ನಟನೆ ಮಾಡುತ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!