ಹೊಸದಿಗಂತ ಡಿಜಿಟಲ್ ಡೆಸ್ಕ್:
ಮೆಟ್ರೋ ನಿಲ್ದಾಣಗಳಲ್ಲಿ ಹೊರರಾಜ್ಯದ ಅಮುಲ್ ಕಿಯೋಸ್ಕ್‌ಗಳನ್ನು ಸ್ಥಾಪಿಸಿದ್ದು, ನಮ್ಮ ನಂದಿನಿಗೆ ಮನ್ನಣೆ ಕೊಟ್ಟಿಲ್ಲ. ಇಷ್ಟಾದರೂ ಅಧಿಕಾರ ಬರೋ ಮುಂಚೆ ಸೇವ್ ನಂದಿನಿ ಅಭಿಯಾನ ಮಾಡಿದ್ದ ಕಾಂಗ್ರೆಸ್ ಸರ್ಕಾರ ಕಣ್ಮುಚ್ಚಿ ಕುಳಿತಿದೆ ಎಂದು ಕನ್ನಡಿಗರು ಗರಂ ಆಗಿದ್ದಾರೆ.
ಬಿಎಮ್‌ಆರ್‌ಸಿಎಲ್ ನೇಮಕಾತಿಯಲ್ಲಿ ಕನ್ನಡಿಗರಿಗೆ ಚಾನ್ಸ್ ಕೊಟ್ಟಿಲ್ಲ ಎಂದು ಗರಂ ಆಗಿದ್ದ ಜನ ಈಗ ಮತ್ತೊಮ್ಮೆ ಸರ್ಕಾರ ಹಾಗೂ ಬಿಎಮ್‌ಆರ್‌ಸಿಎಲ್ ಮೇಲೆ ಗರಂ ಆಗಿದ್ದಾರೆ.
ಬೆಂಗಳೂರಿಗರ ಪ್ರಮುಖ ಸಂಚಾರ ನಾಡಿಯೆಂದರೆ ಅದು ನಮ್ಮ ಮೆಟ್ರೋ. ನಮ್ಮ ಮೆಟ್ರೋದಲ್ಲಿ ಪ್ರತಿನಿತ್ಯ 6-7 ಲಕ್ಷ ಮೆಟ್ರೋ ಪ್ರಯಾಣಿಕರು ಸಂಚರಿಸಿ, ಬಿಎಂಆರ್‌ಸಿಎಲ್ ಅನ್ನು ಬೆಂಗಳೂರಿಗರು ಬೆಳೆಸುತ್ತಿದ್ದಾರೆ. ಆದರೆ ಕನ್ನಡಿಗರಿಗೆ, ಕರ್ನಾಟಕದ ಬ್ರ‍್ಯಾಂಡ್ ನಂದಿನಿಗೆ ಬೆಂಗಳೂರು ಮೆಟ್ರೋ ನಿಗಮ ಮನ್ನಣೆ ಕೊಡದೇ, ಗುಜರಾತ್‌ನ ಅಮುಲ್‌ಗೆ ಆದ್ಯತೆ ಕೊಟ್ಟು ಬೆಂಗಳೂರಿನ 10 ಮೆಟ್ರೋ ನಿಲ್ದಾಣಗಳಲ್ಲಿ ಅಮುಲ್ ಕಿಯೋಸ್ಕ್ಗಳನ್ನು ತೆರೆಯಲು ಅವಕಾಶ ನೀಡಿದೆ.
ಈ ಕೂಡಲೇ ಇದನ್ನು ನಿಲ್ಲಿಸಿ ನಮ್ಮ ನಂದಿನಿ ಬ್ರ್ಯಾಂಡ್‌ಗೆ ಅವಕಾಶ ಕೊಡಬೇಕು ಎಂದು ಜನ ಆಗ್ರಹಿಸಿದ್ದಾರೆ.