CINE| ಪಬ್ಲಿಕ್‌ನಲ್ಲಿ ಗೆಳೆಯನಿಗೆ ಮುತ್ತು ಕೊಟ್ಟು ಟ್ರೋಲಿಗರ ಬಾಯಿಗೆ ಆಹಾರವಾದ ನಟಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಹಾಲಿವುಡ್‌ ನಟಿ ಆಮಿ ಜಾಕ್ಸನ್ ಭಾರತೀಯ ಚಲನಚಿತ್ರಗಲ್ಲಿ ನಟಿಸಿ ಸಾಕಷ್ಟು ಜನಪ್ರಿಯತೆ ಗಿಟ್ಟಿಸಿಕೊಂಡಿದ್ದಾರೆ. ಮದ್ರಾಸಿ ಟೌನ್ ಚಿತ್ರದ ಮೂಲಕ ತಮಿಳಿಗೆ ಎಂಟ್ರಿ ಕೊಟ್ಟ ಈಕೆ, ತೆಲುಗು, ಕನ್ನಡ ಸಿನಿಮಾಗಳಲ್ಲೂ ಪ್ರೇಕ್ಷಕರನ್ನು ರಂಜಿಸಿದ್ದಾರೆ. ಒಳ್ಳೆ ಕ್ರೇಜ್‌ ಇರುವಾಗ ಈ ನಟಿ ಮಾಡಿಕೊಂಡ ಅವಾಂತರ ಈಗ ಟ್ರೋಲಿಗರ ಬಾಯಿಗೆ ಆಹಾರವಾಗಿದ್ದಾರೆ.

ಆಮಿ ಇತ್ತೀಚೆಗೆ ತನ್ನ ಬಾಯ್ ಫ್ರೆಂಡ್ ಜೊತೆ ಭಾರತ ಪ್ರವಾಸಕ್ಕೆ ಬಂದಿದ್ದರು. ಭಾರತ ಪ್ರವಾಸವನ್ನು ಎಂಜಾಯ್ ಮಾಡುತ್ತಿರುವ ಆಮಿ ಮುಂಬೈನ ಇಂಡಿಯಾ ಗೇಟ್ ಬಳಿ ಸಾರ್ವಜನಿಕವಾಗಿ ಮುತ್ತು ಕೊಟ್ಟು ಟೀಕೆಗೆ ಒಳಗಾದರು.

ಇಂಡಿಯಾ ಗೇಟ್ ನಲ್ಲಿ ತನ್ನ ಬಾಯ್ ಫ್ರೆಂಡ್ ಲಿಪ್ ಕಿಸ್ ನೀಡುತ್ತಿರುವ ಫೋಟೋಗಳನ್ನು ತೆಗೆದು ಸಾಮಾಜಿಕ ಜಲತಾಣದಲ್ಲಿ ಹರಿಬಿಟ್ಟಿದ್ದಾಳೆ. ಸಾರ್ವಜನಿಕ ಸ್ಥಳದಲ್ಲಿ ಇದೆಂತಹ ವರ್ತನೆ ಎಂದು ಟೀಕಿಸುತ್ತಿದ್ದಾರೆ. ಆಮಿ ಜಾಕ್ಸನ್ ಮತ್ತು ಎಡ್ವರ್ಡ್ ಜಾಕ್ ಪೀಟರ್ ಬಗ್ಗೆ ಭಾರತದಲ್ಲಿ ಸಾರ್ವಜನಿಕವಾಗಿ ಇಂತಹ ಕೆಲಸಗಳನ್ನು ಮಾಡಬಾರದು ಎಂದು ಕಮೆಂಟ್ ಮಾಡುತ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!