ದೆಹಲಿಯಿಂದ ಚಿಕಾಗೋಗೆ ಹೊರಟಿದ್ದ ಏರ್​ ಇಂಡಿಯಾ ವಿಮಾನಕ್ಕೆ ಬಂತು ಬಾಂಬ್ ಬೆದರಿಕೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ದೆಹಲಿಯಿಂದ ಚಿಕಾಗೋಗೆ ಹೊರಟಿದ್ದ ಏರ್​ ಇಂಡಿಯಾ ವಿಮಾನಕ್ಕೆ ಬಾಂಬ್ ಬೆದರಿಕೆ ಬಂದಿದ್ದು, ಕೆನಡಾದಲ್ಲಿ ವಿಮಾನವನ್ನು ತುರ್ತು ಭೂಸ್ಪರ್ಶ ಮಾಡಲಾಯಿತು.

ಈ ಕುರಿತು ಏರ್ ಇಂಡಿಯಾ ಪ್ರಕಟಣೆ ಹೊರಡಿಸಿದ್ದು, ಮಂಗಳವಾರ ದೆಹಲಿಯಿಂದ ಚಿಕಾಗೋಗೆ ತೆರಳುತ್ತಿದ್ದ ಅಲ್ 127 ವಿಮಾನಕ್ಕೆ ಬಾಂಬ್ ಬೆದರಿಕೆ ಬಂದಿತ್ತು. ಇದಾದ ಬಳಿಕ ಮುನ್ನೆಚ್ಚರಿಕೆಯಾಗಿ ವಿಮಾನವನ್ನು ಕೆನಡಾದ ಇಕಾಲುಯಿಟ್ ವಿಮಾನ ನಿಲ್ದಾಣದಲ್ಲಿ ಇಳಿಸಲಾಯಿತು.

ಭದ್ರತಾ ಪ್ರೋಟೋಕಾಲ್ ಪ್ರಕಾರ ವಿಮಾನ ಮತ್ತು ಪ್ರಯಾಣಿಕರನ್ನು ಪರಿಶೀಲಿಸಲಾಗುತ್ತಿದೆ ಎಂದು ಏರ್ ಇಂಡಿಯಾ ಹೇಳಿಕೆಯಲ್ಲಿ ತಿಳಿಸಿದೆ. ಪ್ರಯಾಣಿಕರಿಗೆ ಸಹಾಯ ಮಾಡಲು ವಿಮಾನ ನಿಲ್ದಾಣದಲ್ಲಿ ಏಜೆನ್ಸಿಗಳನ್ನು ಸಕ್ರಿಯಗೊಳಿಸಲಾಗಿದೆ.

ಜವಾಬ್ದಾರಿಯುತ ವಿಮಾನಯಾನ ನಿರ್ವಾಹಕರಾಗಿ ಬೆದರಿಕೆಗಳನ್ನು ಗಂಭೀರವಾಗಿ ಪರಿಗಣಿಸಲಾಗಿದೆ ಎಂದು ಏರ್ ಇಂಡಿಯಾ ಹೇಳಿದೆ. ಪ್ರಯಾಣಿಕರಿಗೆ ಉಂಟಾದ ಅನಾನುಕೂಲತೆಗಾಗಿ ಕ್ಷಮೆ ಇರಲಿ. ವಿಮಾನಯಾನ ಸಂಸ್ಥೆಗೆ ಉಂಟಾದ ನಷ್ಟವನ್ನು ಸರಿದೂಗಿಸಲು ಕಾನೂನು ಕ್ರಮವನ್ನು ಪರಿಗಣಿಸಲಾಗುವುದು.

ಮಂಗಳವಾರ ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನಕ್ಕೆ ಬಾಂಬ್ ಬೆದರಿಕೆ ಬಂದಿತ್ತು. ಈ ವಿಮಾನದಲ್ಲಿ 132 ಪ್ರಯಾಣಿಕರಿದ್ದರು (ಬೋಯಿಂಗ್ 737-ಮ್ಯಾಕ್ಸ್ 8). ಈ ವಿಮಾನ ಜೈಪುರದಿಂದ ಬರುತ್ತಿತ್ತು. ಅಯೋಧ್ಯೆಯಲ್ಲಿಳಿದು ಕೆಲ ಸಮಯದ ಬಳಿಕ ಬೆಂಗಳೂರಿಗೆ ಹೋಗಬೇಕಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!