ಹೊಸದಿಗಂತ ಡಿಜಿಟಲ್ ಡೆಸ್ಕ್:
1979ರಲ್ಲಿ ತೆರೆಕಂಡ ಮಂಜಿಲ್ ಚಿತ್ರದ ‘ರಿಮ್ ಜಿಮ್ ಗಿರೆ ಸಾವನ್’ ಹಾಡು ಎಷ್ಟು ಸೂಪರ್ ಹಿಟ್ ಆಗಿತ್ತು ಎಂಬುದು ಎಲ್ಲರಿಗೂ ಗೊತ್ತೇ ಇದೆ. ಈ ಹಾಡನ್ನು ವೃದ್ಧ ದಂಪತಿ ಮಳೆಯಲ್ಲಿ ಫ್ರೇಮ್ ಬೈ ಫ್ರೇಮ್ ಮರುಸೃಷ್ಟಿಸಿ ಮಾಡಿರುವ ವಿಡಿಯೋ ಈಗ ವೈರಲ್ ಆಗುತ್ತಿದೆ.
ಈಗ ಮುಂಬೈನಲ್ಲಿ ಭಾರೀ ಮಳೆಯಾಗುತ್ತಿದ್ದು, ಈ ಮಳೆಯಲ್ಲಿ ರೀಲ್ಸ್, ವಿಡಿಯೋ ಮಾಡುವವರ ಸಂಖ್ಯೆಯೇನೂ ಕಡಿಮೆಯಾಗಿಲ್ಲ. ಹಾಗೆಯೇ ಈ ಮಳೆಯಲ್ಲಿಯೆ ವೃದ್ಧ ದಂಪತಿ ಮಂಜಿಲ್ ಚಿತ್ರದ ಮಳೆ ಹಾಡನ್ನು ಅದ್ಭುತವಾಗಿ ಮರುಸೃಷ್ಟಿಸಿದ್ದಾರೆ. ಅಮಿತಾಬ್ ಬಚ್ಚನ್ ಮತ್ತು ಮೌಸಮಿ ಚಟರ್ಜಿ ಈ ಹಾಡಿನಲ್ಲಿ ನಟಿಸಿದ್ದಾರೆ. ಟ್ವಿಟ್ಟರ್ ಬಳಕೆದಾರ ಅರುಣ್ ಪಣಿಕ್ಕರ್ ಶೇರ್ ಮಾಡಿರುವ ಈ ವಿಡಿಯೋ ವೈರಲ್ ಆಗುತ್ತಿದೆ. ವೀಡಿಯೋದಲ್ಲಿ ಕಾಣಿಸಿಕೊಂಡಿರುವ ದಂಪತಿ ಶೈಲೇಶ್ ಇನಾಮ್ ದಾರ್ ಮತ್ತು ಅವರ ಪತ್ನಿ ವಂದನಾ. ಈ ವಿಡಿಯೋವನ್ನು ಅವರ ಸ್ನೇಹಿತರಾದ ಅನುಪ್ ರಿಂಗಂಗಾವ್ಕರ್ ಮತ್ತು ಅವರ ಪತ್ನಿ ಅಂಕಿತಾ ಚಿತ್ರೀಕರಿಸಿದ್ದಾರೆ.
ಈ ವೀಡಿಯೋ ನೋಡಿದ ನೆಟ್ಟಿಗರು, ‘ವಿಡಿಯೋ ತುಂಬಾ ನ್ಯಾಚುರಲ್ ಆಗಿ ತೆಗೆಯಲಾಗಿದೆ..ಸಾಧಾರಣ ಬದುಕನ್ನು ಹಾಡಿನಲ್ಲಿ ಚೆನ್ನಾಗಿ ತೋರಿಸಲಾಗಿದೆ’ ಎಂಬ ಕಮೆಂಟ್ ಹರಿದಾಡುತ್ತಿವೆ. ಒಬ್ಬರು ‘ಲವ್ಲಿ..ಇದು ನನ್ನ ನೆಚ್ಚಿನ ಹಳೆಯ ಬಾಂಬೆ ಮಾನ್ಸೂನ್ ಹಾಡು’ ಎಂದಿದ್ದಾರೆ. ಯುವಕರಷ್ಟೇ ಅಲ್ಲ.. ದೊಡ್ಡವರೂ ಕೂಡ ಇಂತಹ ವಿಡಿಯೋಗಳಲ್ಲಿ ನಟಿಸಿ ಇಂಪ್ರೆಸ್ ಮಾಡಬಹುದು ಎಂಬ ಅಭಿಪ್ರಾಯ ವ್ಯಕ್ತವಾಗಿದೆ.