ಹೊಸದಿಗಂತ ಡಿಜಿಟಲ್ ಡೆಸ್ಕ್:
ಸರೋಜಮ್ಮ ನಮ್ಮ ಜೊತೆ ಇರಬೇಕಿತ್ತು ಹಿರಿಯ ಜೀವವನ್ನು ಕಳ್ಕೊಂಡಿದ್ದೇವೆ, ಕನ್ನಡ ಚಿತ್ರರಂಗ ಹಿರಿಯರಿಲ್ಲದ ಮನೆಯಾಗುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯೆ, ಹಿರಿಯ ನಟಿ ಉಮಾಶ್ರೀ ಭಾವುಕರಾಗಿದ್ದಾರೆ.
ಬಿ.ಸರೋಜಾದೇವಿಯವರ ಅಂತಿಮ ದರುಶನದ ಬಳಿಕ ಮಾತನಾಡಿ, ನಮ್ಮ ಭಾರತ ದೇಶದಲ್ಲಿ ಅತ್ಯಂತ ಪ್ರಬುದ್ಧವಾದಂತಹ, ದಕ್ಷಿಣದ ಧ್ರುವ ತಾರೆಯೆಂದೇ ಪ್ರಸಿದ್ಧಿಯಾಗಿದ್ದ ಮೇರು ನಟಿ ಇಂದು ನಮ್ಮ ಜೊತೆಗಿಲ್ಲ ಎನ್ನುವುದು ತುಂಬಾ ದುಃಖದ ಸಂಗತಿ. ಅವರು ವೈಯಕ್ತಿಕ ಜೀವನ, ವೃತ್ತಿ ಜೀವನ, ಅವರು ನಡೆದು ಬಂದ ರೀತಿ ಮುಂದಿನ ಎಲ್ಲ ಪೀಳಿಗೆಗೂ ಮಾದರಿ. ಹೇಗೆ ಶಿಸ್ತುಬದ್ದವಾಗಿ ಇರಬೇಕು ಎನ್ನುವುದು ಸರೋಜಮ್ಮನನ್ನು ನೋಡಿ ಕಲಿಬೇಕು ಎಂದರು.