ಹೊಸದಿಗಂತ ಡಿಜಿಟಲ್ ಡೆಸ್ಕ್:
ನೀರು, ಜಲಪಾತ ಹಾಗೂ ಸಮುದ್ರಗಳ ಬಳಿ ತೆಗೆದುಕೊಳ್ಳುವ ಡೇಂಜರ್ ಸೆಲ್ಫಿಯಿಂದಾಗಿ ಮತ್ತೊಬ್ಬ ವ್ಯಕ್ತಿ ಮೃತಪಟ್ಟಿದ್ದಾನೆ.
ಅಬ್ಬಿಫಾಲ್ಸ್ ಬಳಿ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಹೋದ ಪ್ರವಾಸಿಗನೋರ್ವ ನೀರುಪಾಲಾಗಿರುವ ಘಟನೆ ಹೊಸನಗರ ತಾಲೂಕಿನ ಯಡೂರು ಗ್ರಾಮದ ಬಳಿ ನಡೆದಿದೆ. ವಿನೋದ್ ರಾಜ್ (26) ನೀರುಪಾಲಾದ ಪ್ರವಾಸಿಗ.
ಭಾನುವಾರ ಬೆಂಗಳೂರಿನಿಂದ 12 ಜನ ಸಾಫ್ಟ್ವೇರ್ ಇಂಜಿನಿಯರ್ಗಳ ತಂಡ ಅಬ್ಬಿಫಾಲ್ಸ್ ವೀಕ್ಷಣೆಗೆ ಆಗಮಿಸಿತ್ತು. ಈ ವೇಳೆ ವಿನೋದ್ ರಾಜ್ ಫಾಲ್ಸ್ ಬಳಿ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಹೋಗಿ ಕಾಲುಜಾರಿ ಅಬ್ಬಿಗುಂಡಿಗೆ ಬಿದ್ದಿದ್ದಾರೆ.
ವಿನೋದ್ ರಾಜ್ ಬೆಂಗಳೂರಿನ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದು, ಮೂಲತಃ ಬಳ್ಳಾರಿ ಜಿಲ್ಲೆಯವರು ಎಂದ ತಿಳಿದು ಬಂದಿದೆ. ವಿನೋದ್ ರಾಜ್ ಪತ್ತೆಗೆ ಹೊಸನಗರ ಅಗ್ನಿಶಾಮಕ ದಳ ಸಿಬ್ಬಂದಿ ಶೋಧಕಾರ್ಯ ನಡೆಸುತ್ತಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಫಾಲ್ಸ್ ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿರುವುದರಿಂದ ಫಾಲ್ಸ್ಗೆ ತೆರಳುವ ಮಾರ್ಗವನ್ನು ಅರಣ್ಯ ಇಲಾಖೆ ಬಂದ್ ಮಾಡಿದೆ.