August 13, 2026
Thursday, August 13, 2026
spot_img

ಬೆಳ್ಳಿಪರದೆಯಲ್ಲಿ ಮಹಾಕಾವ್ಯದ ಸ್ಪರ್ಶ: IMAX ಸ್ಕ್ರೀನ್‌ನಲ್ಲಿ ಅಪ್ಪಳಿಸಲಿದೆ ರಾಜಮೌಳಿ ವಿಷನ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ದಿಗ್ಗಜ ನಿರ್ದೇಶಕ ಎಸ್‌ಎಸ್‌ ರಾಜಮೌಳಿ ನಿರ್ದೇಶನದ ಬಹುನಿರೀಕ್ಷಿತ ‘ವಾರಣಾಸಿ’ ಸಿನಿಮಾ ಜಾಗತಿಕ ಮಟ್ಟದಲ್ಲಿ ದೊಡ್ಡ ಮಟ್ಟದ ಸದ್ದು ಮಾಡುತ್ತಿದೆ. ಈ ಗ್ಲೋಬಲ್ ಆಕ್ಷನ್ ಅಡ್ವೆಂಚರ್ ಸಿನಿಮಾವನ್ನು ಸುಧಾರಿತ IMAX ತಂತ್ರಜ್ಞಾನದಲ್ಲಿ ಶೂಟ್ ಮಾಡಲಾಗುತ್ತಿದ್ದು, ಈ ಪ್ರೀಮಿಯಂ ಫಾರ್ಮ್ಯಾಟ್ ಆಯ್ಕೆ ಮಾಡಿದ್ದೇಕೆ ಎಂಬುದನ್ನು ರಾಜಮೌಳಿ ಸ್ಪಷ್ಟಪಡಿಸಿದ್ದಾರೆ.

ವಿಶಾಲ ಕಥಾಹಂದರಕ್ಕೆ ತಾಂತ್ರಿಕ ಮೆರುಗು

ಫ್ರೆಂಚ್ ಮ್ಯಾಸಜಿನ್‌ ಒಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ಚಿತ್ರದ ಬೃಹತ್ ದೃಶ್ಯಾವಳಿಗಳನ್ನು ಸಾಮಾನ್ಯ ಪರದೆಯಲ್ಲಿ ಸೆರೆಹಿಡಿಯುವುದು ಅಸಾಧ್ಯವಾಗಿತ್ತು ಎಂದಿದ್ದಾರೆ. ಸಿನಿಮಾದಲ್ಲಿ ಮೂಡಿಬರಲಿರುವ 300 ಅಡಿ ಎತ್ತರದ ಅಂಟಾರ್ಟಿಕಾದ ಹಿಮಶಿಖರಗಳು ಹಾಗೂ ರಾಮಾಯಣದ ಭವ್ಯ ವಾನರ ಸೇನೆಯ ದೃಶ್ಯಗಳನ್ನು ಪೂರ್ಣ ಪ್ರಮಾಣದಲ್ಲಿ ಪ್ರೇಕ್ಷಕರಿಗೆ ತಲುಪಿಸಲು ಐಮ್ಯಾಕ್ಸ್ ತಂತ್ರಜ್ಞಾನ ಅತ್ಯಗತ್ಯವಾಗಿತ್ತು ಎಂದು ವಿವರಿಸಿದ್ದಾರೆ.

ಶೇಕಡಾ 80 ರಷ್ಟು ಚಿತ್ರೀಕರಣ ಪೂರ್ಣ

ಚಿತ್ರದ ಮುಖ್ಯ ಕಥಾಹಂದರವನ್ನು ಇನ್ನು ಗುಟ್ಟಾಗಿ ಇಡಲಾಗಿದ್ದರೂ, ಸಿನಿಮಾದ ಮೇಲಿನ ನಿರೀಕ್ಷೆ ಮುಗಿಲ ಮುಟ್ಟಿದೆ. ಮೂಲಗಳ ಪ್ರಕಾರ, ಪ್ರಮುಖ ಸಾಹಸ ದೃಶ್ಯಗಳ ಶೂಟಿಂಗ್ ಮುಗಿದಿದ್ದು, ಒಟ್ಟಾರೆ ಶೇಕಡಾ 80 ರಷ್ಟು ಭಾಗದ ಚಿತ್ರೀಕರಣ ಯಶಸ್ವಿಯಾಗಿ ಪೂರ್ಣಗೊಂಡಿದೆ. ಬೆಳ್ಳಿಪರದೆಯಲ್ಲಿ ಈ ದೃಶ್ಯ ವೈಭವ ವೀಕ್ಷಕರಿಗೆ ಹೊಸ ಅನುಭವ ನೀಡಲಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !