ಅಯೋಧ್ಯೆ ಶ್ರೀರಾಮ ಮಂದಿರಕ್ಕೆ ತಮಿಳುನಾಡಿನಿಂದ 620 ಕೆಜಿ ತೂಕದ ಗಂಟೆ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಅಯೋಧ್ಯೆಯಲ್ಲಿ ನೂತನವಾಗಿ ನಿರ್ಮಿಸಲಾಗಿರುವ ರಾಮಮಂದಿರದಲ್ಲಿ 620 ಕೆ.ಜಿ. ತೂಕದ ಗಂಟೆಯೊಂದು ರಾರಾಜಿಸಲಿದೆ. ತಮಿಳುನಾಡಿನಲ್ಲಿ ತಯಾರಿಸಲಾದ ಗಂಟೆಯನ್ನು ಅಯೋಧ್ಯೆಗೆ ತರಲಾಗಿದ್ದು , ಮಂದಿರದ ನಿರ್ಮಾಣ ಕಾರ್ಯ ಮುಗಿದ ಬಳಿಕ ವಿಶೇಷವಾಗಿ ತಯಾರಿಸಲಾದ ಈ ಗಂಟೆಯನ್ನು ದೇವಾಲಯದಲ್ಲಿ ಸ್ಥಾಪಿಸಲಾಗುವುದು ಎಂದು ದೇವಾಲಯದ ಟ್ರಸ್ಟ್ ಹೇಳಿಕೆ ನೀಡಿದ್ದಾರೆ.

ಈ ಗಂಟೆಯ ಮೇಲೆ ಜೈ ಶ್ರೀ ರಾಮ್ ಎಂದು ಬರೆಯಲಾಗಿದ್ದು, ಮಂದಿರದ ನಿರ್ಮಾಣ ಕಾರ್ಯ ಪೂರ್ಣಗೊಂಡ ಬಳಿಕ 620 ಕೆಜಿ ತೂಕದ ಗಂಟೆಯನ್ನು ಅಳವಡಿಸುವ ಕಾರ್ಯ ನಡೆಯಲಿದೆ ಎಂದು ಟ್ರಸ್ಟ್ ತಿಳಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!