SHCOKING VIDEO| ವೃದ್ಧನ ಮೇಲೆ ದಾಳಿ ನಡೆಸಿ 100 ಮೀಟರ್‌ವರೆಗೂ ಎಳೆದೊಯ್ದ ಹಸು!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ವೃದ್ಧನ ಮೇಲೆ ಕುಪಿತಗೊಂಡ ಹಸುವೊಂದು ದಾಳಿ ನಡೆಸಿ ನೂರು ಮೀಟರ್‌ವರೆಗೂ ಎಳೆದೊಯ್ದ ಘಟನೆ ಪಂಜಾಬ್‌ನಲ್ಲಿ ನಡೆದಿದೆ. ಸಿಸಿಟಿವಿಯಲ್ಲಿ ದಾಖಲಾಗಿರುವ ದೃಶ್ಯಗಳು ಬೆಚ್ಚಿ ಬೀಳಿಸುವಂತಿವೆ.

ಮೊಹಾಲಿಯ ಪುನ್‌ನಲ್ಲಿ ಹಸುವೊಂದು 83 ವರ್ಷದ ವ್ಯಕ್ತಿ ಮೇಲೆ ಹಲ್ಲೆ ನಡೆಸಿ 100 ಮೀಟರ್‌ವರೆಗೂ ರಸ್ತೆಯಲ್ಲಿ ಎಳೆದೊಯ್ದಿದೆ. ಈ ದಾರುಣ ಘಟನೆಯಲ್ಲಿ ಗಂಭೀರ ಗಾಯಗೊಂಡ ವೃದ್ಧ ಪ್ರಾಣ ಕಳೆದುಕೊಂಡಿದ್ದಾರೆ. ಅವರನ್ನು ರಕ್ಷಿಸಲು ಸವಾರರು ಪ್ರಯತ್ನಪಟ್ಟರೂ ಫಲ ಸಿಗಲಿಲ್ಲ.

ಈ ಘಟನೆಯಲ್ಲಿ ಮೃತಪಟ್ಟ ವೃದ್ಧನನ್ನು ಸರೂಪ್ ಸಿಂಗ್ ಎಂದು ಗುರುತಿಸಲಾಗಿದ್ದು, ಹಸು ಆತನನ್ನು ಎಳೆದೊಯ್ಯುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ದೃಶ್ಯಾವಳಿಗಳನ್ನು ನೋಡಿದ ನೆಟಿಜನ್‌ಗಳು ಬೆಚ್ಚಿಬಿದ್ದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!