ಹೊಸದಿಗಂತ ಡಿಜಿಟಲ್ ಡೆಸ್ಕ್:
ಚೀನಾದ ಕಮ್ಯುನಿಸ್ಟ್ ಪಕ್ಷದ ಕಾಂಗ್ರೆಸ್ ನಲ್ಲಿ ಅನಿರೀಕ್ಷಿತ ಘಟನೆಯೊಂದು ನಡೆದಿದೆ. ಚೀನಾದ ಮಾಜಿ ಅಧ್ಯಕ್ಷ ಹು ಜಿಂಟಾವೊ ಅವರನ್ನು ಬಲವಂತವಾಗಿ ಸಭೆಯಿಂದ ಹೊರಹಾಕಿರುವ ಘಟನೆಯಿಂದ ಜಗತ್ತಿನ ಇತರೆ ರಾಷ್ಟ್ರಗಳಿಗೆ ಶಾಕ್ ಆಗಿದೆ. ಹು ಜಿಂಟಾವೊ ಅವರನ್ನು ಸಭೆಯಿಂದ ಏಕೆ ಹೊರಹಾಕಲಾಯಿತು ಎಂಬುದನ್ನು ಚೀನಾ ಇನ್ನೂ ಬಹಿರಂಗಪಡಿಸಿಲ್ಲ. ಅವರನ್ನು ಹೊರಕರೆದೊಯ್ದ ವಿಡಿಯೋ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.
ಕಳೆದ ಕೆಲವು ವಾರಗಳಿಂದ ಚೀನಾದ ಕಮ್ಯುನಿಸ್ಟ್ ಕಾಂಗ್ರೆಸ್ ಸಭೆ ನಡೆಸುತ್ತಿದೆ. ಈ ಸಭೆಯ ಕೊನೆಯ ದಿನ, ಕೇಂದ್ರ ಸಮಿತಿಯು ಪ್ರಮುಖ ನಿರ್ಧಾರಗಳು ಮತ್ತು ನಿರ್ಣಯಗಳನ್ನು ಕೈಗೊಂಡಿತು ಆದರೆ, ಈ ಸಮಾರೋಪ ಸಮಾರಂಭದಲ್ಲಿ ಹು ಜಿಂಟಾವೊ ಅವರನ್ನು ಸಭಾಂಗಣದಿಂದ ಹೊರಗೆ ಕಳುಹಿಸಲಾಯಿತು ಎಂದು ಹಲವು ಮಾಧ್ಯಮಗಳು ವರದಿ ಮಾಡಿವೆ.
Emperor Xi just had his predecessor Hu Jintao hauled out of the CCP summit on live TV in full view of everyone
Ruthless pic.twitter.com/OTnsHKokSu
— ShapiroExposed.com (@JackPosobiec) October 22, 2022
ಕೆಲ ಸಿಬ್ಬಂದಿ ಅಲ್ಲಿಗೆ ಬಂದು ಜಿಂಟಾವೊ ಅವರೊಂದಿಗೆ ಮಾತನಾಡಿದ್ದಾರೆ, ಮೊದಲ ವ್ಯಕ್ತಿಯ ಮಾತಿಗೆ ಒಪ್ಪದೆ ಅಲ್ಲೇ ಕುಳಿತಿದ್ದ ಅವರನ್ನು ಮತ್ತಿಬ್ಬರು ಸಿಬ್ಬಂದಿ ಬಂದು ಜಿಂಟಾವೊರನ್ನು ಕುಳಿತಿದ್ದ ಕುರ್ಚಿಯಿಂದ ಮೇಲಕ್ಕೆತ್ತಿರುವ ದೃಶ್ಯ ಕಾಣುತ್ತದೆ. ಹೊರಡುವ ಮುನ್ನ ಅವರು ಕ್ಸಿ ಜಿನ್‌ಪಿಂಗ್‌ಗೆ ಏನೋ ಹೇಳಿದಂತೆ ತೋರುತ್ತದೆ ಅವರ ಮಾತಿಗೆ ಜಿನ್‌ಪಿಂಗ್ ಹೆಚ್ಚು ತಲೆಕೆಡಿಸಿಕೊಂಡಂತೆ ಕಾಣುತ್ತಿಲ್ಲ.
ಬಳಿಕ ಸಿಬ್ಬಂದಿ ಅವರನ್ನು ಕರೆದುಕೊಂಡು ಹೋಗಿ ಹೊರಗೆ ಕಳುಹಿಸಿದ್ದಾರೆ. ಸಭಾಂಗಣದಲ್ಲಿ ಸುಮಾರು ಎರಡು ನಿಮಿಷಗಳ ಕಾಲ ಎಲ್ಲರೂ ಮೌನವಾಗಿ ಈ ದೃಶ್ಯವನ್ನು ವೀಕ್ಷಿಸಿದರು. ಈ ವಿಡಿಯೋವನ್ನು ಟ್ವಿಟ್ಟರ್ ವೈರಲ್ ಆಗಿದೆ. ಈ ಬಗ್ಗೆ ಚೀನಾ ಏನು ಹೇಳುತ್ತದೆ ಎಂದು ಎಲ್ಲರೂ ಕಾತುರದಿಂದ ಕಾದಿದ್ದಾರೆ.