ಹೊಸದಿಗಂತ ವರದಿ, ಬಸವಕಲ್ಯಾಣ:
ಬೈಕ್’ಗೆ ಅಪರಿಚಿತ ವಾಹನ ಡಿಕ್ಕಿಯಾಗಿ ಇಬ್ಬರು ಯುವಕರು ಮೃತಪಟ್ಟ ದಾರುಣ್ಯ ಘಟನೆ ಬಸವಕಲ್ಯಾಣ ತಾಲೂಕಿನ ಹೊನ್ನಳ್ಳಿ ಗ್ರಾಮದ ಸಮೀಪ ಜರುಗಿದೆ.
ತಾಲೂಕಿನ ಲಾಡವಂತಿ ಗ್ರಾಮದ ನಿವಾಸಿ ಮಹಾದೇವ ಮಂಗೆ (19) ಹಾಗೂ ವಡ್ಡರಗಾ ಗ್ರಾಮದ ನಿವಾಸಿ ಸಚಿನ್ ಬೋಸ್ಲೆ (20) ಘಟನೆಯಲ್ಲಿ ಮೃತಪಟ್ಟ ಯುವಕರಾಗಿದ್ದಾರೆ.
ರಾಜ್ಯದ ಗಡಿಯಲ್ಲಿರುವ ತಡಮೂಡ ಗ್ರಾಮದಕ್ಕೆ ತೆರಳಿ ಮರಳಿ ಲಾಡವಂತಿ ಗ್ರಾಮದಕ್ಕೆ ಬರುವಾದ ಎದುರಿನಿಂದ ಬಂದ ಅಪರಿಚಿತ ವಾಹನ ಡಿಕ್ಕಿಯಾಗಿ ಘಟನೆ ಸಂಭವಿಸಿದ್ದು, ಘಟನೆಯಲ್ಲಿ ಗಾಯಗೊಂಡ ಯುವಕರಿಗೆ ಚಿಕಿತ್ಸೆಗಾಗಿ ನಗರದ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿತ್ತು, ಈ ಪೈಕಿ ಓರ್ವ ಯುವಕ ಆಸ್ಪತ್ರೆಗೆ ಬರುವ ಮುನ್ನವೇ ಮೃತಪಟ್ಟರೆ ಮತ್ತೋರ್ವ ಯುವಕನಿಗೆ ಬೀದರ್’ಗೆ ಸಾಗಿಸುವಾಗ ಮಾರ್ಗಮಧ್ಯೆ ಕೊನೆಯುಸಿರೆಳೆದಿದ್ದಾನೆ.
ಸುದ್ದಿ ತಿಳಿದ ಮಂಠಾಳ ಠಾಣೆ ಪೊಲೀಸರ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ಈ ಕುರಿತು ಮಂಠಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
.