ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಳ್ಳಂಬೆಳಗ್ಗೆ ಬೆಂಗಳೂರು ನಗರಕ್ಕೆ ಆಗಮಿಸಿದ ಜಿಂಕೆಯೊಂದು ಅಪರಿಚಿತ ವಾಹನ ಡಿಕ್ಕಿಯಾಗಿ ಸಾವನ್ನಪ್ಪಿದ ಘಟನೆ ಕೋರಮಂಗಲದ 100 ಫೀಟ್ ರಸ್ತೆಯಲ್ಲಿ ನಡೆದಿದೆ.
ಮುಂಜಾನೆ ಐದು ಗಂಟೆ ಸುಮಾರಿಗೆ ನಗರದೊಳಗೆ ಕಾಣಿಸಿಕೊಂಡ ಜಿಂಕೆ, ಯಾವುದೋ ಅಪರಿಚಿತ ವಾಹಕ್ಕೆ ಸಿಲುಕಿ ನಡು ರಸ್ತೆಯಲ್ಲಿಯೇ ಉರುಳಿದೆ. ಮಾಹಿತಿ ಪಡೆದು ಸ್ಥಳಕ್ಕೆ ಧಾವಿಸಿ ಬಂದ ಗ್ರೀನ್ ಆರ್ಮಿ ಫೋರ್ಸ್, ತುರ್ತು ಚಿಕಿತ್ಸೆ ನೀಡುವ ಪ್ರಯತ್ನ ಮಾಡಿದ್ದರಾದರೂ ಈ ವೇಳೆಗಾಗಲೇ ಜಿಂಕೆ ಸಾವನ್ನಪ್ಪಿತ್ತು.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ