ಆನಂದ್ ಮಹೀಂದ್ರಾಗೆ ಮಾತ್ರವಲ್ಲ, ಎಂಥವರಿಗೂ ಬೇಸರದ ಸಂಗತಿ: ಈ ವಿಡಿಯೋದಲ್ಲೇನಿದೆ?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಉದ್ಯಮಿ ಆನಂದ್ ಮಹೀಂದ್ರಾ ಸಾಮಾಜಿಕ ಜಾಲತಾಣಗಳಲ್ಲಿ ತುಂಬಾ ಸಕ್ರಿಯರಾಗಿದ್ದು, ವಿಡಿಯೋವೊದಂನ್ನು ಹಂಚಿಕೊಂಡು ತಮ್ಮ ಬೇಸರ ಹೊರಹಾಕಿದ್ದಾರೆ.

ಇತ್ತೀಚೆಗಷ್ಟೇ ಮುಂಬೈನ ಗೇಟ್ ವೇ ಆಫ್ ಇಂಡಿಯಾ ಬಳಿ ಕೆಲವರು ಸಮುದ್ರದಲ್ಲಿ ಕಸ ಸುರಿಯುತ್ತಿರುವ ವಿಡಿಯೋವನ್ನು ಪ್ರತಿಕ್ರಿಯಿಸಿದ ಆನಂದ್‌ ಮಹೀಂದ್ರಾ..”ಇದನ್ನು ನೋಡಲು ತುಂಬಾ ದುಃಖವಾಗಿದೆ. ಜನರು ಅವರ ದಾರಿಯನ್ನು ಬದಲಾಯಿಸದಿದ್ದರೆ, ಎಷ್ಟೇ ಮೂಲಸೌಕರ್ಯಗಳನ್ನು ಸುಧಾರಿಸಿದರೂ ನಗರದ ಜೀವನದ ಗುಣಮಟ್ಟ ಕಾಣುವುದಿಲ್ಲ” ಎಂಬ ಶೀರ್ಷಿಕೆಯೊಂದಿಗೆ ಪೋಸ್ಟ್ ಮಾಡುವುದರ ಜೊತೆಗೆ, ಅವರು ತಮ್ಮ ಪೋಸ್ಟ್ ಅನ್ನು ಗ್ರೇಟರ್ ಮುಂಬೈ ಮಹಾನಗರ ಪಾಲಿಕೆ, ಮುಂಬೈ ಪೊಲೀಸರಿಗೆ ಟ್ಯಾಗ್ ಮಾಡಿದ್ದಾರೆ.

ಆನಂದ್ ಮಹೀಂದ್ರಾ ಅವರ ಪೋಸ್ಟ್ ಅಂತರ್ಜಾಲದಲ್ಲಿ ವೈರಲ್ ಆದ ನಂತರ, ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ ಮತ್ತು ಮುಂಬೈ ಪೊಲೀಸರು ಕಸವನ್ನು ಸುರಿದ ವ್ಯಕ್ತಿಯನ್ನು ಪತ್ತೆಹಚ್ಚಿದ 10,000 ರೂ. ದಂಡ ವಿಧಿಸಿದರು.

ಎಲ್ಲಾ ನಗರಗಳಲ್ಲಿ ತ್ಯಾಜ್ಯ ವಿಲೇವಾರಿಗೆ ಸುಲಭ ಪ್ರವೇಶವನ್ನು ಸ್ಥಾಪಿಸಬೇಕು. ಟಿವಿ, ಸಾಮಾಜಿಕ ಮಾಧ್ಯಮಗಳಲ್ಲಿ ತ್ಯಾಜ್ಯ ವಿಲೇವಾರಿ ಬಗ್ಗೆ, ಹೋರ್ಡಿಂಗ್‌ಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದು ನೆಟ್ಟಿಗರು ಆಗ್ರಹಿಸಿದರು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!