ಚರ್ಚಿಲ್ ಟೀಕೆಗೆ 75 ವರ್ಷಗಳ ಬಳಿಕ ಬ್ರಿಟಿಷರಿಗೆ ರಿಷಿ ಸುನಕ್‌ ದಿಟ್ಟ ಉತ್ತರ:ಆನಂದ್‌ ಮಹೀಂದ್ರಾ ಟ್ವೀಟ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

200 ವರ್ಷಗಳ ಕಾಲ ಭಾರತೀಯರನ್ನು ಆಳಿದ ಬ್ರಿಟಿಷ್ ದೇಶದ ನಾಯಕನಾಗಿ ಭಾರತ ಮೂಲದ ರಿಷಿ ಸುನಕ್‌ ಆಯ್ಕೆಯಾಗಿದ್ದಾರೆ.  ಇತಿಹಾಸದಲ್ಲಿ ಮರೆಯಲಾಗದ ಈ ಘಟನೆಯ ಕುರಿತು ಆನಂದ್ ಮಹೇಂದ್ರ ಕುತೂಹಲಕಾರಿ ಟ್ವೀಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅನಿರೀಕ್ಷಿತ ಬೆಳವಣಿಗೆಗಳ ನಡುವೆ ಬ್ರಿಟನ್ ಪ್ರಧಾನಿಯಾಗಿ ರಿಷಿ ಸುನಕ್ ಆಯ್ಕೆಯಾದ ಮೇಲೆ ಇಡೀ ಭಾರತವೇ ಸಂಭ್ರಮಿಸುತ್ತಿದೆ. ಭಾರತೀಯರನ್ನು 200 ವರ್ಷಗಳ ಕಾಲ ಗುಲಾಮರನ್ನಾಗಿ ಮಾಡಿ ಅವಮಾನ ಮಾಡಿದ ಬ್ರಿಟೀಷ್ ದೇಶಗಳ ಪ್ರಧಾನಿಯಾಗಿ ನಮ್ಮ ಭಾರತೀಯನೇ ಆಗಿದ್ದಾರೆ ಎಂದು ಸಂತಸ ವ್ಯಕ್ತಪಡಿಸುತ್ತಿದ್ದಾರೆ. ಈ ಇತಿಹಾಸ ನಿರ್ಮಿಸಿದ ಘಟನೆಗೆ ಆನಂದ್ ಮಹೇಂದ್ರ ಪ್ರತಿಕ್ರಿಯಿಸಿ ಆಸಕ್ತಿಕರವಾದ ಟ್ವೀಟ್ ಮಾಡಿದ್ದಾರೆ.

ಭಾರತದ ವಿರುದ್ಧ ಬ್ರಿಟನ್‌ನ ಮಾಜಿ ಪ್ರಧಾನಿ ವಿನ್‌ಸ್ಟನ್ ಚರ್ಚಿಲ್ ಅವರ ಹೇಳಿಕೆಯನ್ನು ಆನಂದ್ ಮಹೇಂದ್ರ ಟ್ವೀಟ್‌ನಲ್ಲಿ ಈ ಘಟನೆಯನ್ನು ನೆನಪಿಸಿಕೊಂಡಿದ್ದಾರೆ. “1947 ರಲ್ಲಿ, ವಿನ್‌ಸ್ಟನ್ ಚರ್ಚಿಲ್ ಸ್ವಾತಂತ್ರ್ಯದ ಸಮಯದಲ್ಲಿ, ಎಲ್ಲಾ ಭಾರತೀಯ ನಾಯಕರು ಕೆಳಮಟ್ಟದವರು ಜೊತೆಗೆ ಶಕ್ತಿಹೀನರು ಎಂದು ವ್ಯಂಗ್ಯವಾಡಿದರು. ಇದೀಗ ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳಾಗಿವೆ ಈ ಸಮಯದಲ್ಲಿ ಭಾರತೀಯ ಮೂಲದ ವ್ಯಕ್ತಿಯೊಬ್ಬರು ಬ್ರಿಟನ್‌ನ ಆಡಳಿತವನ್ನು ವಹಿಸಿಕೊಳ್ಳುವ ಮೂಲಕ ಬ್ರಿಟೀಷರಿಗೆ ದಿಟ್ಟ ಉತ್ತರವನ್ನು ನೀಡಿದ್ದಾರೆ ಎಂದು ಎಂದು ಟ್ವೀಟ್ ಮಾಡಿದ್ದಾರೆ.

ಬ್ರಿಟಿಷರ ಆಡಳಿತದ ಲಗಾಮು ಪಡೆದ ಮೊದಲ ಭಾರತೀಯ ಮೂಲದ ವ್ಯಕ್ತಿ ಎಂಬ ಅಪರೂಪದ ದಾಖಲೆಯನ್ನು ರಿಷಿ ಹೊಂದಿದ್ದಾರೆ. ಈ ವಿಚಾರ ಕುರಿತು ತಮ್ಮದೇ ಶೈಲಿಯಲ್ಲಿ ಆನಂದ್ ಮಹೀಂದ್ರ ಮಾಡಿರುವ ಈ ಟ್ವೀಟ್ ಕುತೂಹಲ ಮೂಡಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!