G-20 ನಾಯಕರಿಗೆ `ಅರಕು ಕಾಫಿ’ ಗಿಫ್ಟ್ ಕೊಟ್ಟ ಮೋದಿ ಸರ್ಕಾರ, ಆನಂದ್ ಮಹೀಂದ್ರ ದಿಲ್‌ ಖುಷ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಜಿ20 ನಾಯಕರಿಗೆ ಪ್ರಧಾನಿ ಮೋದಿ ಅರಕು ಕಾಫಿ ಉಡುಗೊರೆಯಾಗಿ ನೀಡಿದ್ದಕ್ಕೆ ಆನಂದ್ ಮಹೀಂದ್ರಾ ಸಂತಸ ವ್ಯಕ್ತಪಡಿಸಿದ್ದಾರೆ. ಇದನ್ನು ತಮ್ಮ ಅಧಿಕೃತ ಟ್ವಿಟರ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಭಾರತದ ಅಧ್ಯಕ್ಷತೆಯಲ್ಲಿ ನಡೆದ ಜಿ20 ಶೃಂಗಸಭೆಯ ನಾಯಕರಿಗೆ ಪ್ರಧಾನಿ ಮೋದಿ ವಿಶೇಷ ಉಡುಗೊರೆ ನೀಡಿದರು. ಇದನ್ನು ಪ್ರಸ್ತುತಪಡಿಸುವ ಮೂಲಕ ಭಾರತದ ಸಾಂಸ್ಕೃತಿಕ ಪರಂಪರೆಯನ್ನು ಮತ್ತೊಮ್ಮೆ ಎತ್ತಿ ಹಿಡಿದಿದ್ದಾರೆ. ಮೋದಿ ನೀಡಿದ ಉಡುಗೊರೆಗಳಲ್ಲಿ ಪ್ರಸಿದ್ಧ ʻಅರಕು ಕಾಫಿಯೂʼ ಸೇರಿದೆ. ಬೆಳೆಯುತ್ತಿರುವ ಭಾರತದ ಕಾಫಿ ಉದ್ಯಮಕ್ಕೆ ಮತ್ತಷ್ಟು ಪುಷ್ಟಿ ಕೊಡಲು ಅರಕು ಕಾಫಿಯನ್ನು ಉಡುಗೊರೆಯಾಗಿ ನೀಡಿದ್ದಕ್ಕೆ ಉದ್ಯಮಿ ಆನಂದ್ ಮಹೀಂದ್ರಾ ಮೋದಿ ಸರ್ಕಾರಕ್ಕೆ ಧನ್ಯವಾದ ತಿಳಿಸಿದರು.

ಅರಕು ಒರಿಜಿನಲ್ಸ್ ಮಂಡಳಿಯ ಅಧ್ಯಕ್ಷ ಸ್ಥಾನವನ್ನು ಹೊಂದಿರುವ ಮಹೀಂದ್ರಾ, ‘ಅರಕು ಮಂಡಳಿಯ ಅಧ್ಯಕ್ಷರಾಗಿ ಈ ಬಹುಮಾನದ ಆಯ್ಕೆಯನ್ನು ನಾನು ಇಷ್ಟಪಡುತ್ತೇನೆ, ಹೆಮ್ಮೆ ಕೂಡ. ಅರಕು ಕಾಫಿ ‘ವಿಶ್ವದ ಅತ್ಯುತ್ತಮ, ಭಾರತದಲ್ಲಿ ಬೆಳೆದ’ಬೆಳೆ ಎಂಬುದಕ್ಕೆ ಪರಿಪೂರ್ಣ ಉದಾಹರಣೆಯಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.

ಆಂಧ್ರಪ್ರದೇಶದ ಸುಂದರ ಪ್ರದೇಶ ಅರಕು ಕಣಿವೆಯಲ್ಲಿ ಕಾಫಿ ಬೆಳೆಯನ್ನು ಬೆಳೆಯಲಾಗುತ್ತದೆ. ಅರಕು ಕಾಫಿಯ ಜೊತೆಗೆ ಭಾರತದ ಶ್ರೀಮಂತ ಮತ್ತು ವೈವಿಧ್ಯಮಯ ರುಚಿಗಳನ್ನು ವಿಶ್ವ ನಾಯಕರಿಗೆ ಮೋದಿ ಪ್ರಸ್ತುತಪಡಿಸಿದ್ದು ಸಾವಯವ ಕೃಷಿ ಪದ್ಧತಿಗೆ ಸಾಕ್ಷಿಯಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!