ಹೊಸದಿಗಂತ ವರದಿ ಶಿರಸಿ :
ಇತಿಹಾಸ ಪ್ರಸಿದ್ಧ ಸೋಂದಾ ಸ್ವರ್ಣವಲ್ಲೀ ಮಹಾ ಸಂಸ್ಥಾನಕ್ಕೆ 55 ನೇ ಯತಿಗಳಾಗಿ ಆನಂದಭೋದೇಂದ್ರ ಸರಸ್ವತಿ ಸ್ವಾಮೀಜಿಯಾಗಿ ನಿಯೋಜನೆಗೊಂಡರು.
ಬ್ರಹ್ಮಚಾರಿ ವೇ.ನಾಗರಾಜ ಭಟ್ಟ ಅವರು ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿಗಳಿಂದ ಸನ್ಯಾಸ ದೀಕ್ಷೆ ಸ್ವೀಕರಿಸಿದರು.
ಇದಕ್ಕೂ ಮುನ್ನ ಬೆಳಿಗ್ಗೆ ಶಾಲ್ಮಲಾ ನದಿಯಲ್ಲಿ ಜಲಾಶಯಗಮನ, ಸಾವಿತ್ರಿ ಪ್ರವೇಶ, ಪ್ರೇಷೋಚ್ಛಾರಣೆ, ಕಾಷಾಯ ವಸ್ತ್ರ ಧಾರಣೆಯ ನಂತರ ಪೂರ್ಣಕುಂಬ ಮೆರವಣಿಗೆ ಮೂಲಕ ಶ್ರೀಮಠಕ್ಕೆ ಕಿರಿಯ ಯತಿಗಳನ್ನು ಕರೆತರಲಾಯಿತು. ನಂತರ ಪರ್ಯಂಕಶೌಚ, ಮಠದಲ್ಲಿ ಯೋಗ ಪಟ್ಟ ನೀಡಲಾಯಿತು. ಶ್ರೀ ಗಂಗಾಧರೇಂದ್ರ ಸರಸ್ವತಿ ಶ್ರೀಗಳು ನೂತನ ಯತಿಗಳಿಗೆ ಆನಂದಭೋದೇಂದ್ರ ಸರಸ್ವತಿ ಎಂದು ನಾಮಕರಣ ಮಾಡಿ ಘೋಷಣೆ ಮಾಡಿ ದಂಡ ಕಂಮಡಲಗಳನ್ನು ನೀಡಿದರು.
ಈ ವೇಳೆ ಮಠದಲ್ಲಿ ನೆರೆದಿದ್ದ 30 ಸಾವಿರಕ್ಕೂ ಹೆಚ್ಚು ಭಕ್ತರು ಹರ್ಷೋದ್ಗಾರ ಮುಗಿಲುಮುಟ್ಟಿತು. ಬ್ರಹ್ಮವಿದಾಶೀರ್ವಚನ, ಅಕ್ಷರಾಯುತ ಕಾರ್ಯಕ್ರಮಗಳು ನಡೆದವು. ವಿವಿಧ ಮಠದ ಯತಿಗಳು ಸಾನ್ನಿಧ್ಯ ವಹಿಸಿದ್ದರು.