ಹೊಸದಿಗಂತ ಡಿಜಿಟಲ್ ಡೆಸ್ಕ್:
ಚಿತ್ತೂರು ಜಿಲ್ಲೆಯ ತಿರುಪತಿಯಲ್ಲಿ ಸರಣಿ ಅವಘಡಗಳು ನಡೆಯುತ್ತಿವೆ..ಇದೀಗ ಮತ್ತೊಂದು ಅಪಘಾತ ನಡೆದಿದ್ದು, ಐವರು ಸ್ಥಳದಲ್ಲೇ ಸಾವನ್ನಪ್ಪಿ 8 ಮಂದಿಗೆ ಗಂಭೀರ ಗಾಯಗೊಂಡಿದ್ದಾರೆ. ಎದುರಿಗೆ ಬರುತ್ತಿದ್ದ ಟೆಂಪೋ ಟ್ರಾವೆಲರ್‌ಗೆ ಹೆರಿಟೇಜ್ ಹಾಲಿನ ಟ್ಯಾಂಕರ್ ಡಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ನಡೆದಿದೆ. ಅಪಘಾತಕ್ಕೆ ಅತಿಯಾದ ವೇಗವೇ ಕಾರಣ ಎಂದು ಪೊಲೀಸರು ಪತ್ತೆ ಮಾಡಿದ್ದಾರೆ.
ಪೊಲೀಸರ ವಿವರಗಳ ಪ್ರಕಾರ, ತಿರುಪತಿಯ ಎಸ್‌ಆರ್ ಇಂಡಿಯಾ ಪ್ರೈಮ್ ಪ್ರಾಪರ್ಟೀಸ್‌ನ ರಿಯಲ್ ಎಸ್ಟೇಟ್ ಮ್ಯಾನೇಜರ್‌ಗಳಾದ ಸುಬ್ರಹ್ಮಣ್ಯಂ ಮತ್ತು ರಾಜಶೇಖರ್ ರೆಡ್ಡಿ ಅವರು ವಡಮಲಪೇಟೆ ಮಂಡಲದ ಎಸ್‌ವಿ ಪುರಂನಲ್ಲಿರುವ ಅಂಜೇರಮ್ಮ ಅವರಿಗೆ ಹಣ ಪಾವತಿಸಲು ಭಾನುವಾರ ತೆರಳಿದ್ದರು. ತಮ್ಮ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ 12 ನೌಕರರು ಟೆಂಪೋ ಟ್ರಾವೆಲರ್‌ನಲ್ಲಿ ಹೊರಟರು. ಟೆಂಪೋ ಟೋಲ್ ಪ್ಲಾಜಾ ಆಚೆ ಅಂಜೇರಮ್ಮ ದೇವಸ್ಥಾನಕ್ಕೆ ಹೋಗುತ್ತಿದ್ದಾಗ ಎದುರಿನಿಂದ ವೇಗವಾಗಿ ಬಂದ ಹೆರಿಟೇಜ್ ಹಾಲಿನ ಟ್ಯಾಂಕರ್ ಡಿಕ್ಕಿ ಹೊಡೆದಿದೆ. ಈ ವೇಳೆ ಟೆಂಪೋದಲ್ಲಿದ್ದ 12 ಮಂದಿ ಹಾಗೂ ಹಾಲಿನ ಟ್ಯಾಂಕರ್ ಚಾಲಕ ಗಂಭೀರವಾಗಿ ಗಾಯಗೊಂಡಿದ್ದಾರೆ.
ಟೋಲ್ ಪ್ಲಾಜಾ ಆಂಬ್ಯುಲೆನ್ಸ್ ನಲ್ಲಿ ಗಾಯಾಳುಗಳನ್ನು ಪುತ್ತೂರು ಸರಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು.. ಅಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೇಳೆ ಇಬ್ಬರು ಮೃತಪಟ್ಟರು. ಉಳಿದವರನ್ನು ಉತ್ತಮ ಚಿಕಿತ್ಸೆಗಾಗಿ ತಿರುಪತಿ ರುಯಾ ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ಅಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಇನ್ನೂ ಮೂವರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಕಾಂತಿರೇಖಾ, ನಾರಾಯಣ ಸತ್ಯನಾರಾಯಣಪುರದ ರೆಡ್ಡಿ, ರೆಡ್ಡಿಗುಂಟದ ಕುಮಾರಸ್ವಾಮಿ ರೆಡ್ಡಿ, ಅನ್ನಮಯ ಜಿಲ್ಲೆಯ ರಾಮಾಪುರದ ನರಸಿಂಹು, ರಾಜಂಪೇಟೆಯ ಸುಜಾತಾ, ಸತ್ಯಸಾಯಿ ಜಿಲ್ಲೆಯ ಆಂಜನೇಯು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.