ಹೊಸದಿಗಂತ ಡಿಜಿಟಲ್ ಡೆಸ್ಕ್:
ಆಂಧ್ರಪ್ರದೇಶಕ್ಕೆ ಬಜೆಟ್‌ನಿಂದ ಸಿಗುತ್ತಿದೆ ವಿಶೇಷ ಅನುದಾನ:
24-25 ರಲ್ಲಿ ₹15,000 ಕೋಟಿಗಳ ಆರ್ಥಿಕ ಬೆಂಬಲವನ್ನು ಏರ್ಪಡಿಸಲಾಗುವುದು ಎಂದು ಸಚಿವರು ತಿಳಿಸಿದ್ದಾರೆ. ಅಷ್ಟೇ ಅಲ್ಲದೆ ಪೋಲಾವರಂ ನೀರಾವರಿ ಯೋಜನೆ ಪೂರ್ಣಗೊಳಿಸುವುದಾಗಿ ಭರವಸೆ ನೀಡಲಾಗಿದೆ.
ವಿಶಾಖಪಟ್ಟಣಂ-ಚೆನ್ನೈ ಇಂಡಸ್ಟ್ರಿಯಲ್ ಕಾರಿಡಾರ್‌ನಲ್ಲಿ ಕೊಪ್ಪರ್ತಿ ನೋಡ್‌ನಲ್ಲಿ ನೀರು, ವಿದ್ಯುತ್, ರೈಲ್ವೆ ಮತ್ತು ರಸ್ತೆಗಳು ಮತ್ತು ಹೈದರಾಬಾದ್-ಬೆಂಗಳೂರು ಕೈಗಾರಿಕಾ ಕಾರಿಡಾರ್‌ನಲ್ಲಿ ಓರ್ವಕಲ್ ನೋಡ್‌ನಂತಹ ಅಗತ್ಯ ಮೂಲಸೌಕರ್ಯಗಳನ್ನು ಒದಗಿಸಲು ಯೋಜನೆ ಕೈಗೊಳಲಾಗಿದೆ ಎಂದು ಹೇಳಲಾಗಿದೆ.