ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದ ಮದರಸಾಗಳಲ್ಲಿ ಮುಂದಿನ ದಿನಗಳಲ್ಲಿ ರಾಷ್ಟ್ರಗೀತೆ ಹಾಡಿಸಬೇಕು ಅಂದ್ರೆ ಹಾಡಿಸ್ತೇವೆ ಎಂದು ಜಾಮಿಯಾ ಮಸೀದಿ ಮೌಲಾನಾ ಮಕ್ಸೂದ್ ಇಮ್ರಾನ್ ಹೇಳಿದ್ದಾರೆ.
ಉತ್ತರ ಪ್ರದೇಶದ ಮದರಾಸಗಳಲ್ಲಿ ರಾಷ್ಟ್ರಗೀತೆ ಕಡ್ಡಾಯ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಮದರಸಾಗಳಲ್ಲಿ ವಿದ್ಯಾರ್ಥಿಗಳಿಗೆ ಕುರಾನ್ ಬಗ್ಗೆ ಮಾತ್ರ ಪಾಠ ಮಾಡಲಾಗುತ್ತೆ. ರಾಷ್ಟ್ರಗೀತೆ ಹಾಡಿಸಲ್ಲ. ಮುಂದಿನ ದಿನಗಳಲ್ಲಿ ರಾಷ್ಟ್ರಗೀತೆ ಹಾಡಿಸಬೇಕು ಅಂದ್ರೆ ಹಾಡಿಸ್ತೇವೆ.
ರಾಷ್ಟ್ರಗೀತೆ ಹಾಡಿಸುವ ಬಗ್ಗೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುತ್ತೇವೆ. ರಾಷ್ಟ್ರಗೀತೆ ಹಾಡುವುದು ವಿವಾದ ವಿಷಯವಲ್ಲ. ಸಧ್ಯ ಆಗಸ್ಟ್ 15ರಂದು ಮಾತ್ರ ರಾಷ್ಟ್ರಗೀತೆ ಹಾಡುತ್ತಾರೆ ಎಂದು ಹೇಳಿದರು.