ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಮನಗರ ಜಿಲ್ಲೆಯ ಅಂಗನವಾಡಿ ಕೇಂದ್ರದಲ್ಲಿ ಮಗುವೊಂದು ಹಠ ಮಾಡುತ್ತದೆ ಎನ್ನುವ ಕಾರಣಕ್ಕೆ ಅಲ್ಲಿನ ಸಹಾಯಕಿಯೊಬ್ಬರು ಕೈಗೆ ಬರೆ, ಡೈಪರ್ ಗೆ ಖಾರದಪುಡಿ ಹಾಕಿ ವಿಕೃತಿ ಮೆರೆದಿದ್ದಾರೆ.
ರಾಮನಗರ ಜಿಲ್ಲೆಯ ಕನಕಪುರ ತಾಲ್ಲೂಕಿನ ಮಹಾರಾಜಕಟ್ಟೆಯಲ್ಲಿನ ಅಂಗನವಾಡಿ ಕೇಂದ್ರದ ಸಹಾಯಕಿ ಚಂದ್ರಮ್ಮ ಎಂಬುವರು ರಮೇಶ್ ನಾಯಕ್ ಹಾಗೂ ಚೈತ್ರಾ ಬಾಯಿ ದಂಪತಿಯ ಪುತ್ರ ದೀಕ್ಷಿತ್ ಹಠ ಮಾಡುತ್ತಾನೆ ಅಂತ ಕೈಗೆ ಬರೆ, ಡೈಪರ್ ನಲ್ಲಿ ಖಾರದಪುಡಿ ಹಾಕಿ ವಿಕೃತಿ ಮೆರೆದಿದ್ದಾರೆ.
ಇದನ್ನು ಗಮನಿಸಿದ್ದ ಪೋಷಕರು, ಅಂಗನವಾಡಿ ಸಹಾಯಕಿಯ ವಿಕೃತಿ ವಿರುದ್ಧ ಪೊಲೀಸರಿಗೆ, ಇಲಾಖೆಗೆ ದೂರು ನೀಡಿದ್ದರು. ಈ ಸಂಬಂಧ ಪ್ರಕರಣ ದಾಖಲಾಗುತ್ತಿದ್ದಂತೆ, ಅಂಗನವಾಡಿ ಸಹಾಯಕಿಯನ್ನು ಅಮಾನತುಗೊಳಿಸಿ ಇಲಾಖೆ ಆದೇಶಿಸಿದೆ.