ಹೊಸದಿಗಂತ ಡಿಜಿಟಲ್ ಡೆಸ್ಕ್
ಮಗು ಅಳುತ್ತಿದ್ದನ್ನು ನೋಡಿ ಕೋಪಗೊಂಡ ಪಾಪಿ ತಂದೆ ಪುಟಾಣಿಯನ್ನು ಹತ್ಯೆ ಮಾಡಿದ ಘಟನೆ ಆಂಧ್ರಪ್ರದೇಶದ ತಿರುಪತಿಯ ಶ್ರೀಕಾಳಹಸ್ತಿ ಶುಕಬ್ರಹ್ಮ ಆಶ್ರಮದ ಬಳಿಯ ವಾಟರ್ ಹೌಸ್ ಕಾಲೋನಿಯಲ್ಲಿ ನಡೆದಿದೆ.
ಅನಿಲ್ ತನ್ನ 3 ತಿಂಗಳ ಮಗುವನ್ನು ಕೊಲೆ ಮಾಡಿದ ಆರೋಪಿ. ಈತನಿಗೆ ಹಾಗೂ ಈತನ ಪತ್ನಿ ಸ್ವಾತಿ ಜಗಳ ನಡೆದಿತ್ತು. ಅದೇ ವೇಳೆ ಮಗುವಿಗೂ ಜ್ವರ ಬಂದಿದ್ದರಿಂದ ಒಂದೇ ಸಮನೆ ಅಳುತ್ತಿತ್ತು. ಇದರಿಂದಾಗಿ ಕೋಪಗೊಂಡ ಅನಿಲ್ ಮಗುವನ್ನು ನೆಲಕ್ಕೆ ಎಸೆದಿದ್ದಾನೆ.
ನೆಲಕ್ಕೆ ಆ ಮಗುವನ್ನು ಎಸೆದಿದ್ದರಿಂದ ಗಂಭೀರವಾಗಿ ತಲೆಗೆ ಪೆಟ್ಟು ಬಿದ್ದಿತ್ತು. ಇದರಿಂದಾಗಿ ಕೂಡಲೇ ಆ ಮಗುವನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮಗು ಸಾವನ್ನಪ್ಪಿದೆ.
ಸ್ಥಳೀಯರು ಘಟನೆಗೆ ಸಂಬಂಧಿಸಿ ಕೂಡಲೇ ಪೊಲೀಸರನ್ನು ಸಂಪರ್ಕಿಸಿದ್ದಾರೆ. ಪ್ರಕರಣವನ್ನು ದಾಖಲಿಸಿಕೊಂಡ ಪೊಲೀಸರು ಅನಿಲ್ ಅನ್ನು ಮಗುವನ್ನು ಕೊಂದ ಆರೋಪದ ಮೇರೆಗೆ ಬಂಧಿಸಿದ್ದಾರೆ.