ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಂಜಲಿ ಹತ್ಯೆಗೆ ಸಂಬಂಧಿಸಿದಂತೆ ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರು ಮಾತನಾಡಿದ್ದು “ನಿತ್ಯ ಜೀವನದಲ್ಲಿ ಏನಾಗುತ್ತದೆ ಎಂದು ನಮಗೆ ಗೊತ್ತಾಗುವುದಿಲ್ಲ” ಎಂದು ಹೇಳಿದ್ದಾರೆ. ಕೊಲೆಯಾದ ಅಂಜಲಿ ಅವರ ಮನೆಗೆ ಇಂದು (ಮೇ 18) ಸಚಿವ ಸಂತೋಷ ಲಾಡ್ ಮತ್ತು ಶಾಸಕ ಪ್ರಸಾದ್ ಅಬ್ಬಯ್ಯ ಭೇಟಿ ನೀಡಿದರು.
ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವ ಸಂತೋಷ್ ಲಾಡ್, ಘಟನೆಯ ತನಿಖೆಗೆ ಕ್ರೈಂ ಬ್ರಾಂಚ್ ಗೆ ನಿರ್ದೇಶನ ನೀಡುವುದಾಗಿ ತಿಳಿಸಿದರು.
ನೇಹಾ ಹತ್ಯೆ ನಡೆದ ನಂತರ ಇನ್ನೊಂದು ಘಟನೆ ನಡೆದಿದೆ. ಸಮಾಜದಲ್ಲಿ ಇದು ಒಳ್ಳೆಯದಲ್ಲ. ಅದರಲ್ಲೂ ಹುಬ್ಬಳ್ಳಿ-ಧಾರವಾಡದಲ್ಲಂತೂ ಒಳ್ಳೆಯದಲ್ಲ. ಅಹಿತಕರ ಘಟನೆಗಳು ನಡೆದಾಗ ತಕ್ಷಣಕ್ಕೆ ಕಡಿವಾಣ ಹಾಕುವುದು ಪೋಲಿಸರ ಕರ್ತವ್ಯ. ಅಹಿತಕರ ಚಟುವಟಿಕೆಗಳಲ್ಲಿ ಯುವಕರು ಬಲಿಯಾಗ್ತಿದ್ದಾರೆ ಎಂದು ಹೇಳಿದರು.
ಆರೋಪಿ ವಿಶ್ವನ ವಿರುದ್ಧ ಅಂಜಲಿ ಪೋಷಕರು ಮೊದಲೆ ದೂರು ಕೊಟ್ಟಿದ್ದಾಗಿ ಕುಟುಂಬಸ್ಥರು ಹೇಳಿದ್ದಾರೆ. ಹೀಗಾಗಿ ಈಗಾಗಲೆ ಅಂಜಲಿ ಹತ್ಯೆ ತನಿಖೆ ನಡೆಯುತ್ತಿದೆ. ಇನ್ಮುಂದೆ ಇಂತಹ ಅಹಿತಕರ ಘಟನೆ ನಡೆದರೆ ಶಿಸ್ತು ಕ್ರಮ ಕೈಗೊಳ್ಳುತ್ತೇವೆ ಎಂದು ಭರವಸೆ ನೀಡಿದ್ದಾರೆ.