ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾಂಗ್ರೆಸ್ ಸರ್ಕಾರ ಶಕ್ತಿ ಯೋಜನೆಯನ್ನೋ ಜಾರಿ ಮಾಡಿದೆ. ಇದೀಗ ಸಿದ್ದು ಸರ್ಕಾರಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿರುವುದು ಅನ್ನ ಭಾಗ್ಯ ಯೋಜನೆ. ಈ ಬಗ್ಗೆ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಮಾತನಾಡಿದ್ದಾರೆ.
ಅನ್ನರಾಮಯ್ಯ ಅನ್ನಿಸಿಕೊಳ್ಳೋದು ಸುಲಭದ ಮಾತಲ್ಲ, ಸಿದ್ದರಾಮಯ್ಯ ಯೋಜನೆ ಬಗ್ಗೆ ಮಾತನಾಡೋ ಮೊದಲು ಅದನ್ನು ಕಾರ್ಯರೂಪಕ್ಕೆ ತರೋ ಬಗ್ಗೆ ಯೋಚನೆ ಮಾಡಬೇಕಿತ್ತು. ಈಗ ಕೇಂದ್ರ ಕೊಡ್ತಿಲ್ಲ, ಬೇರೆ ರಾಜ್ಯ ಕೊಡ್ತಿಲ್ಲ ಅಂತ ಕಥೆ ಹೇಳ್ತಿದ್ದಾರೆ.
ಇನ್ನುಳಿದ ಗ್ಯಾರೆಂಟಿಗಳು ಹಳ್ಳ ಹತ್ತೋದು ಮಾತ್ರ ಗ್ಯಾರೆಂಟಿ. ಸುಮ್ಮನೆ ಜನರನ್ನು ಆಕರ್ಷಿಸುವಂಥ ಗ್ಯಾರೆಂಟಿಗಳನ್ನು ಘೋಷಣೆ ಮಾಡಿದ್ದೀರಿ, ಆದರೆ ಈಗ ಒದ್ದಾಡ್ತಿದ್ದೀರಿ. ಒಂದೊಂದೇ ಯೋಜನೆ ಹೇಗೆ ಹಳ್ಳ ಹಿಡಿಯುತ್ತದೆ ನೋಡುತ್ತಾ ಇರಿ ಎಂದು ಹೇಳಿದ್ದಾರೆ.