ಹೊಸದಿಗಂತ ಡಿಜಿಟಲ್ ಡೆಸ್ಕ್:
ಇತ್ತೀಚೆಗಷ್ಟೇ ರಿಲೀಸ್ ಆದ ಹಿಟ್ ಸಿನಿಮಾ ಅನ್ನಪೂರ್ಣಿ ಸಾಕಷ್ಟು ವಿವಾದಗಳಿಗೆ ಎಡೆಮಾಡಿಕೊಟ್ಟಿತ್ತು.
ಹಿಂದೂ ಬ್ರಾಹ್ಮಣ ಪೂಜಾರಿಯ ಮಗಳಾದ ಅನ್ನಪೂರ್ಣಿ ಶೆಫ್ ಆಗಲು ನಾನ್ ವೆಜ್ ಅಡುಗೆ ಮಾಡುವುದು ಹಾಗೂ ತಿನ್ನುವುದನ್ನು ಸಿನಿಮಾದಲ್ಲಿ ತೋರಿಸಲಾಗಿತ್ತು. ಅಷ್ಟೇ ಅಲ್ಲದೆ ಮುಸ್ಲಿಂ-ಹಿಂದು ಲವ್ ಸ್ಟೋರಿ, ಹಿಂದೂ ಯುವತಿ ನಮಾಝ್ ಮಾಡುವ ಕಂಟೆಂಟ್ ಕೂಡ ಇದರಲ್ಲಿತ್ತು.
ಇದು ಹಿಂದೂಗಳ ಭಾವನೆಗೆ ಧಕ್ಕೆಯುಂಟುಮಾಡಿದೆ ಎಂದು ಹಿಂದೂ ಮುಖಂಡ ರಮೇಶ್ ಸೋಲಂಕಿ ಠಾಣೆ ಮೆಟ್ಟಿಲೇರಿದ್ದರು. ಇದೀಗ ಸಿನಿಮಾದ ಕೋ ಪ್ರೊಡ್ಯೂಸರ‍್ಸ್ ಆದ ಝೀ ಸ್ಟುಡಿಯೋಸ್ ಹಿಂದೂ ಭಾವನೆಗೆ ಧಕ್ಕೆ ತಂದಿದ್ದಕ್ಕೆ ಕ್ಷಮೆಯಾಚಿಸಿದೆ.
ನಿಮ್ಮ ಭಾವನೆಗಳಿಗೆ ನೋವುಂಟು ಮಾಡುವ ಉದ್ದೇಶ ನಮ್ಮದಲ್ಲಿ, ಸದ್ಯಕ್ಕೆ ನೆಟ್‌ಫ್ಲಿಕ್ಸ್‌ನಿಂದಲೂ ಸಿನಿಮಾ ತೆಗೆದಿರುತ್ತೇವೆ. ಎಡಿಟ್ ಮಾಡಿ ಮತ್ತೆ ಅಪ್‌ಲೋಡ್ ಮಾಡುತ್ತೇವೆ. ಸಿನಿಮಾದಿಂದ ಆದ ಎಲ್ಲ ನೋವಿಗೂ ನಾವು ಕ್ಷಮೆಯಾಚಿಸುತ್ತೇವೆ ಎಂದು ಝೀ ಹೇಳಿದೆ.