TODAYS BIG NEWS | ರಾಜ್ಯದಲ್ಲಿ ಎಲೆಕ್ಷನ್ ದಿನಾಂಕ ಘೋಷಣೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಚುನಾವಣಾ ಆಯೋಗವು ಇಂದು ಕರ್ನಾಟಕ ವಿಧಾನಸಭೆ ಚುನಾವಣೆಗೆ ದಿನಾಂಕವನ್ನು ಘೋಷಣೆ  ಮಾಡಿದ್ದು, ಮೇ 10 ರಂದು ಚುನಾವಣೆ ನಡೆಯಲಿದೆ.

ಚುನಾವಣಾ ಆಯೋಗ ಇಂದು ನವದೆಹಲಿಯ ವಿಜ್ಞಾನ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿದ್ದು, ಮೇ 10 ರಂದು ಚುನಾವಣೆ ಹಾಗು ಮೇ 13 ರಂದು ಮತಎಣಿಕೆ ನಡೆಯಲಿದೆ.

ವೇಳಾಪಟ್ಟಿ ಪ್ರಕಟ ನಂತರ ನೀತಿ ಸಂಹಿತೆ ಜಾರಿಗೆ ಬರಲಿದೆ. 224 ಸದಸ್ಯರುಳ್ಳ ಕರ್ನಾಟಕ ವಿಧಾನಸಭೆಯ ಅವಧಿ ಮೇ.24ಕ್ಕೆ ಕೊನೆಗೊಳ್ಳಲಿದೆ. ಆಡಳಿತಾರೂಢ ಬಿಜೆಪಿಯು 119 ಶಾಸಕರನ್ನು ಹೊಂದಿದ್ದು, ಕಾಂಗ್ರೆಸ್ 75 ಹಾಗೂ ಜೆಡಿಎಸ್ 28  ಸ್ಥಾನಗಳನ್ನು ಹೊಂದಿದೆ.

ಚುನಾವಣೆ ಘೋಷಣೆಗೂ ಮುನ್ನವೇ ರಾಜ್ಯದಲ್ಲಿ ಅಬ್ಬರದ ಪ್ರಚಾರ ನಡೆಯುತ್ತಿದ್ದು, ಬಿಜೆಪಿ ವಿಜಯ ಸಂಕಲ್ಪ ಯಾತ್ರೆ ಮಾಡಿದೆ. ಇನ್ನು ಕಾಂಗ್ರೆಸ್‌ಭಾಎರ್ ಜೋಡೋ ಹಾಗೂ ಪ್ರಜಾ ಧ್ವನಿ ಯಾತ್ರೆ ನಡೆಸಿದೆ. ಜೆಡಿಎಸ್ ಕೂಡ ಮತದಾರರನ್ನು ಸೆಳೆಯಲು ಪಂಚರತ್ನ ಯಾತ್ರೆ ಹಮ್ಮಿಕೊಂಡಿತ್ತು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!