ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಿಕ್ಕಿಂ ರಾಜ್ಯವು ತನ್ನ ಸರ್ಕಾರಿ ನೌಕರಿ ಮಹಿಳೆಯರಿಗೆ ಒಂದು ವರ್ಷ ಹೆರಿಗೆ ರಜೆ, ಪುರುಷರಿಗೆ ಒಂದು ತಿಂಗಳು ಪಿತೃತ್ವ ರಜೆ ನೀವುದಾಗಿ ಘೋಷಿಸಿದೆ.
ಈ ಕುರಿತು ಸಿಕ್ಕಿಂ ಮುಖ್ಯಮಂತ್ರಿ ಪ್ರೇಮ್ ಸಿಂಗ್ ತಮಂಗ್ ಮಾಹಿತಿ ನೀಡಿದ್ದು, ‘ಈ ಯೋಜನೆಯಿಂದ ಸರ್ಕಾರಿ ನೌಕರರು ತಮ್ಮ ಮಕ್ಕಳು ಹಾಗೂ ಕುಟುಂಬದ ಬಗ್ಗೆ ಕಾಳಜಿ ವಹಿಸಲು ಸಹಕಾರಿಯಾಗಲಿದೆ.ಈ ಯೋಜನೆ ಕುರಿತು ಶೀಘ್ರದಲ್ಲೇ ವಿವರ ಪ್ರಕಟಿಸಲಾಗುವುದು’ ಎಂದು ಹೇಳಿದರು.